ಸುದ್ದಿಲೈವ್/ಶಿವಮೊಗ್ಗ
ಸರಿಯಾಗಿ ಜು.15 ರಿಂದ ಸುರಿದ ಮುಂಗಾರು ಮಳೆ ಅನೇಕ ಹಾನಿಯನ್ನ ಉಂಟು ಮಾಡಿದೆ. 4 ಮಾನವ ಹಾನಿ, 10 ಜಾನುವಾರುಗಳ ಸಾವು, 145 ಮನೆಗಳು ಸಂಪೂರ್ಣಹಾನಿ, 437 ಮನೆಗಳು ಭಾಗಶಃ ಹಾನಿ, ಸೇತುವೆ, ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ
668 ಮಿಮಿ ವಾಡಿಕೆ ಮಳೆಯಾಗಬೇಕಿದ್ದ ಜಾಗದಲ್ಲಿ 1109 ಮಿಮಿ ಮಳೆಯಾಗಿದೆ. ಜಿಲ್ಲೆಯ ಎಲ್ಲಾ ಜಲಾಶಯಗಳು ತುಂಬಿಕೊಂಡಿವೆ. ಮಳೆಯಿಂದಾಗಿ ಇದು ವರೆಗೂ 4 ಮಾನವ ಹಾನಿಯಾಗಿದೆ. ಜು.04 ರಂದು ಬೈಸೆ ಗ್ರಾಮದ ಮಹಿಳೆ ಕಾಲು ಸಂಕದಿಂದ ಹಳ್ಳಕ್ಕೆ ಬಿದ್ದು ಜೀವ ಕಳೆದುಕೊಂಡ ಶಶಿಕಲಾ,
ಜೂ.06 ರಂದು ಸಿಡಲಿಗೆ ಬಲಿಯಾದ ತೀರ್ಥಹಳ್ಳಿ ತಾಲೂಕಿನ ಬಿದರಗೋಡಿನ ನಿವಾಸಿ ನಾಗೇಂದ್ರ ಬಿನ್ ಸಿಎನ್ ಪೂಜಾರಿ, ಶಿಕಾರಿಪುರದ ಅಮಟೇಕೊಪ್ಪದ ನಿವಾಸಿ ನಾಗರಾಜ್, ಜು.26 ರಂದು ಮರಬಿದ್ದು ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲಿನ ನಿವಾಸಿ ಸಚಿನ್ ಬಿನ್ ರಾಮಪ್ಪ ಸಾವಾಗಿದ್ದರು. ಇದರಲ್ಲಿ ಇಬ್ವರಿಗೆ ಪರಿಹಾರ ದೊರೆತಿದೆ.
10 ಜಾನುವಾರುಗಳ ಪೈಕಿ 8 ಪ್ರಕರಣಗಳಿಂದ 0.375 ಲಕ್ಷ ರೂ. ಪರಿಹಾರ ದೊರೆತಿದೆ. 1540 ಹೆ. ಪ್ರದೇಶಗಳಲ್ಲಿ ಭತ್ತ, 2300 ಹೆ. ಪ್ರದೇಶಗಳಲ್ಲಿ ಮುಸಿಕಿನ ಜೋಳ ಬೆಳೆಗಳು ಜಲಾವೃತವಾಗಿದೆ. 767 ವಿದ್ಯುತ್ ಕಂಬಗಳು ಹಾನಿಯಾದರೆ 16 ಟ್ರಾನ್ಸ್ ಫಾರ್ಮರ್ ಗಳು ಹಾಮಿಯಾಗಿವೆ. 111 ಸೇತುವೆಗಳು, 381 ಶಾಲೆಗಳು, 260 ಅಂಗನವಾಡಿ ಕೇಂದ್ರಗಳು ಹಾಗೂ 9 ಆರೋಗ್ಯ ಕೇಂದ್ರಗಳು ಮಳೆ ಹಾನಿಗೆ ಒಳಗಾಗಿವೆ.
ಜಿಲ್ಲೆಯಲ್ಲಿ 103 ಕಾಳಜಿ ಕೇಂದ್ರವನ್ನ ಗುರತಿಸಿಕೊಳ್ಳಲಾಗಿದೆ. ಸಾಗರದ ಮಂಡಗಳಲೆ ಮತ್ತು ತಾಳಗುಪ್ಪದಲ್ಲಿ ಮನೆಕಳೆದುಕೊಙಡವರಿಗೆ ಎರಡು ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಈಗಾಗಲೇ ಭದ್ರ ಜಲಾಶಯವು ತುಂಬುತ್ತಾ ಬಂದಿದ್ದು ಈ ಬಗ್ಗೆ ಪ್ರವಾಹ ಉಂಟಾದರೆ ಅದನ್ನ ನಿಭಾಯಿಸುವ ಕುರಿತು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಸಾಧಿಸಲಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_969.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ