ಶಿಕ್ಷಣ ಸಚಿವರಿಗೆ ಶಿಕ್ಷಕರಿಂದ ಮನವಿ |
ಸುದ್ದಿಲೈವ್/ಶಿವಮೊಗ್ಗ
ಪ್ರಾಥಮಿಕ ಶಾಲೆಯ ಶಿಕ್ಷಕರು ಇಂದು ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಶಿಕ್ಷಕರ ಸಚಿವ ಮಧು ಬಂಗಾರಪ್ಪನವರನ್ನ ಭೇಟಿ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಕರಿಗೂ ವರ್ಗಾವಣೆ ಭಾಗ್ಯ ಕಲ್ಪಿಸಬೇಕೆಂದು ಮನವಿ ನೀಡಿದ್ದಾರೆ.
ಮನವಿ ಸ್ವೀಕರಿಸುವ ವೇಳೆ ಸಚಿವರು ಅಸಮಾಧಾನ ತೋಡಿಕೊಂಡರು. ವರ್ಗಾವಣೆ ಕುರಿತು ಶಿಕ್ಷಕರ ವಾಟ್ಸಪ್ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮಧ್ಯರಾತ್ರಿ ವರ್ಗಾವಣೆ ಕುರಿತು ಮೆಸೇಜ್ ಮಾಡ್ತೀರ. ನಾವು ಮನುಷ್ಯರೇ, ದೇಶವನ್ನೇ ತಿದ್ದುವ ನೀವು ಈ ರೀತಿ ನಡೆದುಕೊಂಡರೆ ಹೇಗೆ? ನಿಮಗೆ ಏನು ಬೇಕು ನಮ್ಮ ಬಳಿ ಬನ್ನಿ ಬಗೆಹರಿಸೋಣ ಎಂದು ಆಶ್ವಾಸನೆ ನೀಡಿದ್ದಾರೆ.
ನಂತರ ಮಾತನಾಡಿದ 20 ವರ್ಷದ ಸಮಸ್ಯೆನನ್ನ ತಲೆಮೇಲೆ ಹೇರಲಾಗಿದೆ. ಈ ಹಿಂದೆ ಸರ್ಕಾರಿ ನೌಕರರ 7 ನೇ ವೇತನ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈಗ ಸಮಸ್ಯೆ ಬಗೆಹರಿಸಿದ್ದೇವೆ. ವೈಯ ಮೀಡಿಯಾ ಪ್ರಾಥಮಿಕ ಶಿಕ್ಷಕರ ಸಮಸ್ಯೆ ಬಗೆಹರಿಸಲಾಗುತ್ತದೆ. ಅನುದಾನಿತ ಶಿಕ್ಷಕರನ್ನ ನೇಮಿಸಲಾಗುವುದು ಎಂದರು.
ಇದನ್ನೂ ಓದಿ-https://www.suddilive.in/2024/07/7.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ