ಸುದ್ದಿಲೈವ್/ಭದ್ರಾವತಿ
ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್ ಪಿಯ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಜಲಾಶಯದಲ್ಲಿ ಸದ್ಯ 184.5 ಅಡಿ ನೀರು ಸಂಗ್ರಹವಾಗಿದೆ.
ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣ ಭದ್ರಾವತಿ ನಗರದ ಹೊಸ ಸೇತುವೆ ಮುಳುಗಡೆ ಆಗಿದೆ.
ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣ ಭದ್ರಾವತಿ ನಗರದ ಹೊಸ ಸೇತುವೆ ಮುಳುಗಡೆ ಆಗಿದೆ. ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಹೋಗ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ನಿರ್ಬಂಧ ವಿಧಿಸಿದ್ದಾರೆ. ಇನ್ನು ಸೇತುವೆ ಮೇಲೆ ನೀರು ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಾಗರೀಕರು ಸೇತುವೆ ಬಳಿ ಧಾವಿಸುತ್ತಿದ್ದಾರೆ.
ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಹೋಗ್ತಿರುವ ಪರಿಣಾಮ, ಭದ್ರಾವತಿ ನಗರದ ಕವಲಂದಿ, ಅಂಬೇಡ್ಕರ್ ನಗರ, ಗೌಳಿ ನಗರ, ಎಕ್ಸಿನಾ ಕಾಲೋನಿ ಜಲಾವೃತಗೊಂಡಿವೆ. 4 ಬಡಾವಣೆಗಳಿಂದ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ನೀರು ತುಂಬಿಕೊಂಡಿದ್ದು, ಜಲಾವೃತಗೊಂಡ ಮನೆಗಳ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಭದ್ರಾವತಿ ನಗರದಲ್ಲಿ ಒಟ್ಟು 3 ಕಾಳಜಿ ಕೇಂದ್ರ ತೆರೆದಿದ್ದು, ಸದ್ಯ ಒಂದು ಕಾಳಜಿ ಕೇಂದ್ರದಲ್ಲಿ ಸುಮಾರು 32 ಕುಟುಂಬಗಳು ಆಶ್ರಯ ಪಡೆದಿವೆ. ಇನ್ನು ಸ್ಥಳಕ್ಕೆ ಶಾಸಕ ಸಂಗಮೇಶ್ವರ ಹಾಗು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ