ಗುರುವಾರ, ಜುಲೈ 18, 2024

ರೈಲ್ವೆ ಹಳಿಯ ಮೇಲೆ ಉರುಳಿ ಬಿದ್ದ ಬೃಹದಾಕಾರದ ಮರ

 ಸುದ್ದಿಲೈವ್/ಶಿವಮೊಗ್ಗ

ಅರಸಾಳು ಸಮೀಪ ರೈಲ್ವೆ ಹಳಿಯ ಮೇಲೆ ಉರುಳಿದ ಪರಿಣಾಮ ಬೃಹತ್ ಮರವೊಂದು ನೆಲಕ್ಕುರುಳಿ ವಿದ್ಯುತ್ ಕಂಬಗಳನ್ನ ಹಾನಿ ಉಂಟು ಮಾಡಿದೆ. 

ರೈಲ್ವೆ ಹಳಿಯ ಮೇಲೆ ಉರುಳಿ ಬಿದ್ದ ಬೃಹದಾಕಾರದ ಮರ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ರೈಲ್ವೆ ಸ್ಟೇಷನ್ ಬಳಿ ಭಾರಿ ಮಳೆಗೆ ಮರ ಉರುಳಿದೆ. ರೈಲ್ವೆ ಹಳಿಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ. ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಿಂದ ಒಂದು ಕಿಮೀ ಅಂತರದ ಬಟಾಣಿಜೆಡ್ಡು ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ತೆರಳಿದ್ದ ರೈಲ್ವೆ ಇಲಾಖೆಯ ಸಿಬ್ಬಂದಿಗಳ ಮರ ತೆರವು ಕಾರ್ಯಚರಣೆ ನಡೆಸಿದ್ದಾರೆ. 

ಬೆಳಿಗ್ಗೆ ಬೆಂಗಳೂರು-ತಾಳಗುಪ್ಪ ರೈಲು ಸಂಚಾರಕ್ಕೆ ಈ ಮರ ಅಡಚಣೆ ಉಂಟು ಮಾಡಿತ್ತು. ರೈಲಿನಲ್ಲಿದ್ದ ಪ್ರಯಾಣಿಕರ ತಂಡವೊಂದು ರೆಸ್ಕ್ಯೂ ಮಾಡಿತ್ತು. ಬೆಳಿಗ್ಗೆ ಪಸ್ ಆಗಿದ್ದ ರೈಲಿಗೆ ಮತ್ತು ಇತರೆ ರೈಲಿಗೆ ಈ ಮರ ಮತ್ತೆ ತೊಂದರೆ ಉಂಟು ಮಾಡಿತ್ತು. ಈಗ ಸಿಬ್ಬಂದಿಗಳೆ ಬಂದು ತೆರವು ಕಾರ್ಯ ನಡೆಸಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/blog-post_423.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ