ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಚುನಾವಣೆ ಮುಕ್ತಾಯಗೊಂಡಿದ್ದು ಯಾರು ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಇತರೆ ಸ್ಥಾನಗಳಿಗೆ ಆಯ್ಕೆಯಾಗುವ ಚರ್ಚೆ ಆರಂಭವಾಗುತ್ತಿದ್ದಂತೆ ನಾಳೆ ಈ ಎರಡೂ ಪ್ರಮುಖ ಸ್ಥಾನಕ್ಕೆ ಯಾರು ಆಗುತ್ತಾರೆ ಎಂಬ ಚರ್ಚೆ ಆರಂಭಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದು ಎರಡು ವಾರ ಕಳೆದಿದೆ. 13 ಸ್ಥಾನದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇದರಲ್ಲಿ ಯಾರು 7 ಜನ ನಿರ್ದೇಶಕರು ಒಮ್ಮತವಾಗಿ ಬೆಂಬಲಿಸುತ್ತಾರೆ ಅವರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುತ್ತಾರೆ.
13 ಸ್ಥಾನದ ನಿರ್ದೇಶಕರ ಸ್ಥಾನದಲ್ಲಿ ಒಂದು ರಾಷ್ಟ್ರಭಕ್ತರ ಬಳಗ ಮತ್ತೊಂದು ಸಹಕಾರ ಭಾರತಿಯ ನಿರ್ದೇಕರಿದ್ದು 11 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. 11 ಜನ ನಿರ್ದೇಶಕರೆಲ್ಲರೂ ಆರ್ ಎಂ ಮಂಜುನಾಥ್ ಗೌಡರ ಹಿಂಬಾಲಕರೇ ಆಗಿರುವುದರಿಂದ ಅವರ ಆಯ್ಕೆ ಬಹುತೇಕ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ.
ಗೌಡರ ಹೆಸರು ಅಧ್ಯಕ್ಷರ ನಾಮಫಲಕದಲ್ಲಿ ರಾರಾಜಿಸುತ್ತಿದೆ. ಈ ಹಿನ್ನಲೆಯಲ್ಲಿ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಉಪಾಧ್ಯಕ್ಷ ಸ್ಥಾನ ಮತ್ತು ಇತರೆ ಸ್ಥಾನಗಳಿಗೆ ನಾಳೆ ಆಯ್ಕೆ ನಡೆಯಲಿದೆ. ಇದರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯೇ ಬಹಳ ಪ್ರಮುಖವಾದ ಹುದ್ದೆಯಾಗಿದೆ.
ಆರ್ ಎಂ ಮಂಜುನಾಥ್ ಗೌಡರು ಅವಿರೋಧ ಆಯ್ಕೆ ಆದಲ್ಲಿ ಅದರ ಬೆನ್ನಲ್ಲೇ ಯಾರು ಉಪಾಧ್ಯಕ್ಷರಾಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಈ ಸ್ಥಾನವನ್ನ ಪ್ರಬಲ ಲಿಂಗಾಯಿತರಿಗೆ ನೀಡುವ ನಿರೀಕ್ಷೆ ಇದೆ. ಈ ಎಲ್ಲಾ ಸಾಧ್ಯತೆ ಮತ್ತು ನಿರೀಕ್ಷೆಗಳಿಗೆ ನಾಳೆ ಉತ್ತರ ಸಿಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾವಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಉಪಾಧ್ಯಕ್ಷರ ಮತ್ತು ಇತರೆ ಸ್ಥಾನಗಳ ಆಯ್ಕೆ ಕುರಿತು ಇಂದು ಸಂಜೆ ಮತ್ತು ನಾಳೆ ಸಭೆ ನಡೆಯಲಿದೆ. ಸಭೆ ನಡೆದ ಬಳಿಕ ಎಲ್ಲಾದರ ಬಗ್ಗೆ ತೆರೆಬೀಳಲಿದೆ. ನಾಳೆ ಮಧ್ಯಾಹ್ನ 12-30 ರ ನಂತರ ಚುನಾವಣೆ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎಂದರು.
ಇದನ್ನೂ ಓದಿ-https://suddilive.in/archives/18930
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ