ಸುದ್ದಿಲೈವ್/ಶಿವಮೊಗ್ಗ
ಪ್ರತಿ ಬಾರಿಯ ಮಳೆಗೆ ಇಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದ ಕ್ರೀಡಾಂಗಣ ಕೆರೆಯಂತಾಗುತ್ತದೆ. ಶಿವಮೊಗ್ಗ ನಗರದ ನವುಲೆಯಲ್ಲಿ ಇರುವ ಈ ಕ್ರಿಕೆಟ್ ಸ್ಟೇಡಿಯಂ ಮೈದಾನದಲ್ಲಿ ಈ ಬಾರಿಯ ಮಳೆಗೆ ಸುಮಾರು ಎರಡ ರಿಂದ ಮೂರು ಅಡಿ ನೀರು ನಿಂತಿದೆ.
ನವುಲೆಯಲ್ಲಿ ಇರುವ ಎರಡು ಕ್ರೀಡಾಂಗಣಗಳು ಜಲಾವೃತಗೊಂಡಿದೆ. ಶಿವಮೊಗ್ಗ ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೈದಾನ ಕೆರೆಯಂತಾಗಿದೆ. ಕ್ರೀಡಾಂಗಣದ ಪಕ್ಕದಲ್ಲಿರುವ ಕೆರೆಯ ನೀರು ಕ್ರೀಡಾಂಗಣಕ್ಕೆ ನುಗ್ಗಿದೆ.
ಕ್ರೀಡಾಂಗಣದ ಇತಿಹಾಸ
ಸೂಡ ಅಧ್ಯಕ್ಷ ನಾಗೇಂದ್ರ ರಾವ್ ಇದ್ದ ವೇಳೆ ಕರ್ನಾಟಕದ ರಾಜ್ಯ ಕ್ರಿಕೆಟ್ ಅಕಾಡೆಮಿಗೆ ಜಾಗ ನೀಡುವಂತೆ ಬಂದ ಪ್ರಪೋಸಲ್ ಹಿನ್ನಲೆಯಲ್ಲಿ ನವುಲೆ ಕೆರೆಯ 26 ಎಕರೆ ಜಾಗವನ್ನ ಕ್ರಿಕೆಟ್ ಸಂಸ್ಥೆಗೆ ಹಸ್ತಾಂತರ ಮಾಡಲಾಗುತ್ತದೆ. 40 ಎಕರೆಯ ನವುಲೆ ಕೆರೆ 14 ಎಕರೆಗೆ ಇಳಿಯುತ್ತದೆ. ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಭಾಪತಿಗಳಾದ ಡಿ.ಎಸ್ ಶಂಕರ್ ಮೂರ್ತಿ ಅವರು ಕೇಸ್ ಸಿಎ ಸದಸ್ಯರಾಗಿದ್ದರಿಂದ ರಾಷ್ಟ್ರಪತಿಗಳಿಂದ ಸಹಿ ಮಾಡಿಸಿಕೊಂಡು ಬಂದ ಪರಿಣಾಮ ಕೆರೆಯ ಅಂಗಳವನ್ನ ಮೈದಾನ ಮಾಡಲು ಸಾಧ್ಯವಾಗಿದೆ.
2002 ರಲ್ಲಿ ಕೆಎಸ್ ಸಿಎಗೆ ಹಸ್ತಾಂತರವಾಗುತ್ತದೆ. 2008 ರಿಂದ ಕ್ರಿಜೆಟ್ ಮೈದಾನದಲ್ಲಿ ಪಂದ್ಯಾವಳಿಗಳು ಆರಂಭವಾಗುತ್ತದೆ. ಇದುವರೆಗೂ ರಣಜಿ 3 ಪಂದ್ಯಾವಳಿಗಳು, 22 ವಯೋಮಾನದ ಒಳಗಿನವರಿಗೆ 2 ಪಂದ್ಯಾವಳಿ, 19ವರ್ಷದ ಒಳಗಿನವರ ನಡುವೆ 4 ಪಂದ್ಯಾವಳಿ, 16 ವರ್ಷದ ಒಳಗಿನ ವಯೋಮಾನದರ ನಡುವಿನ 3 ಪಂದ್ಯಾವಳಿ ಬಿಸಿಸಿಐನಿಂದ ನಡೆಯುವ ಕೂಚ್ ಬೆಹಾರ್ ಫೈನಲ್ 1 ನಡೆದಿದೆ, ಮಹಿಳೆಯರ ನಡುವಿನ 2 ಪಂದ್ಯಾವಳಿಗಳು ಸೇರಿ ಸರಿ ಸುಮಾರು 19 ಕ್ಕೂ ಹೆಚ್ಚು ಪಂದ್ಯಾವಳಿಗಳು ನಡೆದಿದೆ,
ಮುಂದಿನ ದಿನಗಳಲ್ಲಿ ನ.19 ರಿಂದ 15 ವರ್ಷದ ಒಳಗಿನ ಮಹಿಳೆಯರ ನಡುವಿನ ಪಂದ್ಯಾವಳಿಗಳು ನಡೆಯಲಿದೆ. ಡಿಸೆಂಬ 16ರಿಂದ ಬಿಸಿಸಿಐ ನಡೆಸುವ ವಿಜಯ ಮರ್ಚೆಂಟ್ ಪಂದ್ಯಾವಳಿಗಳು ನಡೆಯಲಿದೆ. ಮೈದಾನ ಮಾಡಿದ ಮೇಲೆ ಮೈದಾನವನ್ನ ಎತ್ತರಿಸದೆ ಇರುವುದರಿಂದ ಮೈದಾನ ಪ್ರತಿ ಮಳೆಗಾಲದಲ್ಲಿ ಕೆರೆಯಂತಾಗುತ್ತದೆ
ಇದನ್ನೂ ಓದಿ-https://www.suddilive.in/2024/07/blog-post_570.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ