ಭಾನುವಾರ, ಜುಲೈ 7, 2024

ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ

ಸುದ್ದಿಲೈವ್/ಶಿವಮೊಗ್ಗ

ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಜಿಲ್ಲೆಯ ಪ್ರಮುಖ ಮೂರು ಡ್ಯಾಂಗಳಲ್ಲಿ ಪ್ರಸ್ತುತ ಜಲಾಶಯದ ಮಟ್ಟ ಕುಸಿದಿದೆ. ಹೊಸನಗರ, ತೀರ್ಥಹಳ್ಳಿ, ಸಾಗರದಲ್ಲಿ ಮಳೆಯ ಅಬ್ಬರ ಹೆಚ್ಚಾದರೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಳೆಯ ಪ್ರಮಾಣ ಈ ಭಾಗಕ್ಕೆ ಹೋಲಿಸಿದರೆ ಕಡಿಮೆನೆ ಇದೆ.

ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ್ದರಿಂದ ತುಂಗ ಜಲಾಶಯಕ್ಕೆ 18403 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೆ ಪ್ರಮಾಣದ ನೀರು ಹೊರಗೆ ಹೋಗುತ್ತಿದೆ. 15 ಸಾವಿರ ಕ್ಯೂಸೆಕ್ ಗೂ ಅಧಿಕ ನೀರನ್ನ 11 ಗೇಟ್ ಮೂಲಕ ಅರ್ಧ ಮೀಟರ್ ಎತ್ತರ ಗೇಟ್ ತೆಗೆದು ನದಿಗೆ ನೀರು ಹರಿಸಲಾಗುತ್ತಿದೆ. ಉಳಿದ ನೀರನ್ನ ಪವರ್ ಹೌಸ್ ಮೂಲಕ ಹರಿಸಲಾಗುತ್ತಿದೆ.

ಅದರಂತೆ ಭದ್ರ ಜಲಾಶಯಕ್ಕೆ 8600 ಕ್ಯೂಸೆಕ್ ನೀರು ಹರಿದು ಬರುತ್ತಿದೆ.‌131.10 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನಕ್ಕೆ 140 ಅಡಿ ನೀರು ಸಂಗ್ರಹವಾಗಿದೆ.

ಲಿಂಗನಮಕ್ಕಿ ಜಲಾಶಯ ಮಟ್ಟದಲ್ಲಿ ಈ ಬಾರಿ ನೀರಿನ ಪ್ರಮಾಣ ಸಾಕಷ್ಟು ಹರಿದು ಬರುತ್ತಿದೆ. ಕಳೆದ ವರ್ಷ ಈ ದಿನಕ್ಕೆ 1749 ಅಡಿ ಸಂಗ್ರಹವಾಗಿದ್ದ ನೀರು ಇಂದು ಅದರ ಮಟ್ಟ‌1766.75 ಅಡಿ ನೀರು ಸಂಗ್ರಹವಾಗಿದೆ.

ಇದರ ಸಾಮರ್ಥ್ಯ 1816 ಅಡಿಯಷ್ಟಿದೆ. ಸಧ್ಯ ಜಲಾಶಯಕ್ಕೆ 29044 ಕ್ಯೂಸೆಕ್ ನೀರು ಹರಿದು ಬಂದಿದೆ. ನಿನ್ನೆ 1764.8 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು ಹೆಚ್ಚಾದ್ದರಿಂದ ಎರಡು ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.

ಇದನ್ನೂ ಓದಿ-https://suddilive.in/archives/18672

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ