ಸುದ್ದಿಲೈವ್/ತಿರ್ಥಹಳ್ಳಿ
ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಹಕ್ಕು ಪತ್ರ ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಮಾಡುವ ಮೂಲಕ ಮಳೆ ಹಾನಿಗೊಳಗಾದ ಎಲ್ಲಾ ಮನೆಗಳ ಕುಟುಂಬಕ್ಕೆ ಪರಿಹಾರ ಸಿಗದಂತಾಗಿದ್ದು ಮನೆಕಳೆದುಕೊಂಡ ಕುಟುಂಬ ನಿರಾಶ್ರಿತರಾಗಿದ್ದಾರಲ್ಲದೆ ಸೂರಿಲ್ಲದೆ ಪರದಾಡುವಂತಾಗಿದೆ.
ಮಳೆ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ಸರ್ಕಾರ ಪರಿಹಾರ ನೀಡುವಂತೆ ತಾಲೂಕು ಗ್ರಾಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ್ಯ ಅನಿಲ್ ಟಿ.ಜೆ ಒತ್ತಾಯಿಸಿದ್ದಾಾರೆ.
2021-22ನೇಸಾಲಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಳೆಹಾನಿಯಿಂದ ಹಾನಿಗೊಳಗಾದ ಎಲ್ಲಾ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ಪರಿಹಾರ ನೀಡಿತ್ತು.ಆದರೀಗ ಹಕ್ಕು ಪತ್ರ ಹೊಂದಿದ ಮನೆಗಳಿಗೆ ಮಾತ್ರ ಪರಿಹಾರ ನೀಡುವುದಾಗಿ ನಿಯಮ ಮಾಡಿದ್ದು ಡಿಮ್ಯಾಾಂಡ್ ಹೊಂದಿದ ಮನೆಗಳಿಗೆ ಪರಿಹಾರ ನೀಡಲಾಗುತ್ತಿಲ್ಲ.
ಇದರಿಂದ ಡಿಮ್ಯಾಾಂಡ್ ಹೊಂದಿ ಮಳೆಯಿಂದ ಮನೆ ಹಾನಿಗೊಂಡ ಕುಟುಂಬದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಈ ಕಾರಣದಿಂದ ಆತಂಕಕ್ಕೊಳಗಾಗಿರುವ ಬಡ ಕುಟುಂಬಗಳು ಬದುಕು ಕಟ್ಟಿಕ್ಕೊಳಲು ಕಣ್ಣೀರು ಹಾಕುತ್ತಾ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಮಲೆನಾಡು ಪ್ರದೇಶದಲ್ಲಿ 80%ಗೂ ಹೆಚ್ಚು ಕುಟುಂಬಗಳ ಮನೆಗಳು ಹಕ್ಕು ಪತ್ರವನ್ನು ಹೊಂದಿಲ್ಲ,ಅನಾದಿಕಾಲದಿಂದಲು ಅರಣ್ಯಪ್ರದೇಶ, ಸೊಪ್ಪಿನ ಬೆಟ್ಟ ಹಾಗು ಕಂದಾಯ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಗ್ರಾಮಪಂಚಾಯತಿಗಳಿಗೆ ಕಂದಾಯ ಕಟ್ಟಿ ಕೊಂಡು ವಾಸಿಸುತ್ತಿವೆ,
ಅವರುಗಳಿಗೆ ಹಕ್ಕು ಪತ್ರ ನೀಡಲು ಕಾನೂನಿನ ತೊಡಕಿನಿಂದಾಗಿ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಅಂತಹ ಅನೇಕ ಕುಟುಂಬಗಳು ಸರ್ಕಾರದ ಇಂತಹ ಜಾಣಕುರುಡು ನಿಯಮದಿಂದಾಗಿ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.
ಅತಿವೃಷ್ಠಿಯಿಂದ ಹಾನಿಗೊಳಗಾಗುವ ಮನೆಗಳ ಪರಿಹಾರ ದೊರಕಬೇಕಾಗಿರುವುದು ಮಲೆನಾಡಿನ ಪ್ರದೇಶದ ಕುಟುಂಬಗಳಿಗೆ. ಕಾರಣ ಈ ಪ್ರದೇಶಗಳಲ್ಲೇ ಹೆಚ್ಚು ಮಳೆ ಆಗುವುದು ಅಂತೆಯೇ ಅರಣ್ಯಪ್ರದೇಶ ಹೆಚ್ಚಿರುವುದರಿಂದ ಹಕ್ಕು ಪತ್ರ ಪಡೆಯಲು ಸಾಧ್ಯವಿಲ್ಲ.
ಇದನ್ನು ಮನಗೊಂಡ ಬಿಜೆಪಿ ಸರ್ಕಾರ ಮಳೆ ಹಾನಿಗೊಳಗಾದ ಎಲ್ಲಾ ಮನೆಗಳಿಗೂ ಹಾನಿಗೊಳಗಾದ ಪ್ರಮಾಣಾನಾನುಸಾರ ಪರಿಹಾರ ನೀಡಲು ಮುಂದಾಗಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗುತಿತ್ತು.
ಇದರಿಂದ ಅನೇಕ ಮಲೆನಾಡಿನ ಬಡ ಕುಟುಂಬಗಳ ಬದುಕಿಗೆ ಪರಿಹಾರ ಆಸರೆ ಆಗಿತ್ತು. ಇದೀಗ ಹಕ್ಕು ಪತ್ರ ಕಡ್ಡಾಯ ಮಾಡುವ ಮೂಲಕ ಪಟ್ಟಣದಲ್ಲಿ ವಾಸಿಸುವ ಶ್ರೀಮಂತ ಕುಟುಂಬಗಳಿಗೆ ಅನುಕೂಲವಾಗುವಂತಾಗಿದ್ದು ಗ್ರಾಾಮೀಣ ಪ್ರದೇಶದ ಕುಟುಂಬಗಳು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.
ಬಡವರ ಶ್ರೇಯೋಭಿಲಾಷೆಯೇ ನಮ್ಮ ಆದ್ಯ ಕರ್ತವ್ಯ ಎಂದು ಹೇಳುವ ಕಾಂಗ್ರೇಸ್ ಸರ್ಕಾರ ಮಳೆಹಾನಿಗೊಳಗಾದ ಮನೆಗಳ ಪರಿಹಾರಕ್ಕೆ ಹಕ್ಕು ಪತ್ರ ಕಡ್ಡಾಯ ಮಾಡುವ ಮೂಲಕ ಬಡವರ ಕಣ್ಣೀರು ಹರಿಸುವ ಕೆಲಸಕ್ಕೆೆ ಕೈಹಾಕಿದೆ ಎಂದು ಆಸಮದಾನ ವ್ಯಕ್ತಪಡಿಸಿರುವ ಒಕ್ಕೂಟದ ಅಧ್ಯಕ್ಷ ಅನಿಲ್ ಸರ್ಕಾರ ಈ ಸಂಭಂದ ಮರು ಪರಿಶೀಲನೆ ನಡೆಸಿ ಮಳೆಹಾನಿಗೊಳಗಾದ ಎಲ್ಲಾ ಮನೆಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ-https://suddilive.in/archives/19371
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ