ಶುಕ್ರವಾರ, ಜುಲೈ 19, 2024

ಯುಜಿಡಿ ಮ್ಯಾನ್ ಹೋಲ್ ಗೆ ಇಳಿಸಿದ VISL ಟೌನ್ ಶಿಪ್ ಅಧಿಕಾರಿಗಳ ವಿರುದ್ಧ ಎಪ್ಐಆರ್

 ಸುದ್ದಿಲೈವ್/ಭದ್ರಾವತಿ



ಭದ್ರಾವತಿಯಲ್ಲಿ ಯುಜಿಡಿ ಮ್ಯಾನ್ ಹೋಲ್ ಗೆ ಇಳಿಸಿದ ವ್ಯಕ್ತಿಯ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಐಎಸ್ಎಲ್ ಟೌನ್ ಶಿಪ್ ಅಧಿಕಾರಿ ಮೋಹನ್ ಶೆಟ್ಟಿ ಮತ್ತು ಸೂಪರ್ ವೈಸರ್ ಓಂಕಾರಪ್ಪನವರ ವಿರುದ್ಧ ಎಫ್ಐಆರ್ ದಾಖಲಾಗಿದೆ. 


ಬಾಲಭಾರತಿ ಹತ್ತಿರ ಮ್ಯಾನ್ ಹೋಲ್ ನಲ್ಲಿ ಯಾವುದೇ ಸುರಕ್ಷತೆಯಿಲ್ಲದೆ ಮೂವರು ಸ್ಯಾನಿಟರಿ ಕಾರ್ಮಿಕರನ್ನ ಇಳಿಸಿ ಸ್ವಚ್ಛಗೋಳಿಸುವಂತೆ ಸೂಚಿಸಿರುವ ಮೇರೆಗೆ ಈ ದೂರು ದಾಖಲಾಗಿದೆ. 


ಮಾನವ ಶಕ್ತಿ ಹಾಗೂ ಯಾವುದೇ ಸುರಕ್ಷತೆ ಇಲ್ಲದೆ ಮ್ಯಾನ್ ಹೋಲ್ ಗಳಲ್ಲಿ ಇಳಿಸುವಂತಿಲ್ಲ ಎಂಬ ನಿಯಮಾವಳಿಯಲ್ಲಿದೆ. ಈ ನಿಯಮಾವಳಿಗಳನ್ನ ಗಾಳಿಗೆ ತೂರಿದ ವಿಐಎಸ್ಎಲ್ ಟೌನ್ ಶಿಪ್ ಅಧಿಕಾರಿಗಳ ವಿರುದ್ಧ ನಗರಸಭೆ ಅಧಿಕಾರಿ ಪ್ರಕಾಶ್ ಎಂ ಚಪ್ಪಣ್ಣನವರ್ ದೂರು ನೀಡಿದ್ದಾರೆ.


ನಗರಸಭೆ ಪರಿಸರ ವಿಭಾಗದ ಇಂಜಿನಿಯರ್ ಮತ್ತು ಸನಾಜ ಕಲ್ಯಾಣದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಮೋಹಬ್ ಶೆಟ್ಟಿ‌ಮತ್ತು ಓಂಕಾರಪ್ಪನವರ ಹೇಳಿದ್ದರಿಂದ ಕಾರ್ಮಿಜರಾದ ಕುಮಾರ್ ಜಿ, ಆರ್ ಮಹಾದೇವ ಮತ್ತು ಸುಬ್ರಹ್ಮಣಿರನ್ನ ಯಾವುದೇ ಸುರಕ್ಷತೆ ಇಲ್ಲದೆ ಯುಜಿಡಿ ಮ್ಯಾನ್ ಹೋಲ್ ನ್ನ ಸ್ವಚ್ಚಗೋಳಿಸಿದ್ದಾರೆ ಎಂದು ಪ್ರಕಾಶ್ ಎಂ ಚಪ್ಪಣ್ಣನವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 


ಅಷ್ಟೇ ಅಲ್ಲದೆ  ಪೌರಕಾರ್ಮಿಕರು ಮತ್ತು ಇತರೆ ಸಂಘಟನೆ ಮೋಹನ್ ಶೆಟ್ಟಿ ಮತ್ತು ಓಂಪಾರಪ್ಪನವರು ತಿಳಿಸಿದ ಕಾರಣ ಮೂವರು ಕಾರ್ಮಿಕರು ಯುಜಿಡಿ ಮ್ಯಾನ್ ಹೋಲ್ ಗೆ ಇಳಿದು ಕೆಲಸ ನಿರ್ವಹಿಸಿದ್ದಾರೆ. ಇದನ್ನ ಕೇಳಲು ಹೋದ ಸಾಮಾನ್ಯರ ಮೇಲೆ ಟೌನ್ ಶಿಪ್ ಅಧಿಕಾರಿಗಳು ದರ್ಪ ಮೆರೆದಿದ್ದಾರೆ ಎಂದು ದೂರಿದ್ದರು.

ಇದನ್ನೂ ಓದಿ- https://www.suddilive.in/2024/07/blog-post_301.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ