ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಸಙಘದ ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ನಡೆದಿದ್ದು ಶೇ.62% ಮತದಾನ ನಡೆದಿದೆ. 21 ಸ್ಥಾನಕ್ಕೆ ನಿರ್ದೇಶಕರ ಆಯ್ಕೆಯಾಗಲಿದ್ದು ನಾಳೆ ಫಲಿತಾಂಶ ಹೊರಬೀಳಲಿದೆ.
4137 ಮತದಾನದಲ್ಲಿ 2599 ಮತಗಳು ಚಲಾವಣೆಯಾಗಿದೆ. ಮತದಾನ ಇಂದು ಬೆಳಿಗ್ಗೆ 8 ಗಙೆಯಿಂದ ಸಂಜೆ 4 ಗಂಡೆಯ ವರೆಗೆ ನಗರದ ಒಕ್ಕಲಿಗ ಸಮುದಾಯ ಭವನದಲ್ಲಿ ಮತದಾನ ನಡೆದಿದೆ. ಒಂದು ಸಾವಿರ ಮತಗಳುಗೆ ಒಂದು ಬೂತ್ ನ್ನ ರಚಿಸಿ ಮತಚಲಾವಣೆ ಮಾಡಲಾಗಿದೆ.
21 ಸ್ಥಾನಕ್ಕೆ ನಿರ್ದೇಶಕರ ಆಯ್ಕೆ ನಡೆಯಲಿದ್ದು ಒಟ್ಟು 29 ಜನ ನಿರ್ದೇಶಕರು ಸ್ಪರ್ಧಿಸಿದ್ದರು. ಸ್ಪರ್ಧೆಯಲ್ಲಿ ಭರ್ಜರಿ ಪೈಪೋಟಿ ನಡೆದಿದೆ. ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಹೊಸನಗರ ತಾಲೂಕಿನಿಂದ ಒಕ್ಕಲಿಗರು ಆಗಮಿಸಿ ಮತಚಲಾಯಿಸಿದ್ದಾರೆ.
ಮತದಾನವೂ ಸಹ ನಿರೀಕ್ಷೆ ಮೀರಿ ಮತಚಲಾವಣೆಯಾಗಿದೆ ಎಂದು ಸ್ಪರ್ಧಿಗಳು ತಿಳಿಸಿದ್ದಾರೆ. ಚೇತನ್ ಗೌಡ, ರಮೇಶ್ ಹೆಗ್ಡೆ, ಕಡಿದಾಳ್ ಗೋಪಾಲ್, ಸುದರ್ಶನ್ ತಾಯಿಮನೆ, ಆಶಿಕ್, ಹಾಲಿ ಅಧ್ಯಕ್ಷ ಹಾದಿಮೂರ್ತಿ, ರಮೇಶ್, ಬಂಡೆ ವೆಂಕಟೇಶ್ ಸೇರಿದಂತೆ 29 ಜನ ನಿರ್ದೇಶಕರ ಆಯ್ಕೆಗೆ ಮತದಾನ ನಡೆದಿದೆ. ನಾಳೆ ಇವರ ಭವಿಷ್ಯ ಏನಾಗಲಿದೆ ಎಂದು ತಿಳಿಯಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ