ಸೋಮವಾರ, ಆಗಸ್ಟ್ 12, 2024

ಟೈಕ್ವಾಂಡೋ ಸ್ಪರ್ಧೆಯಲ್ಲಿ ಶಿವಮೊಗ್ಗಕ್ಕೆ 8 ಪದಕ

 


ಸುದ್ದಿಲೈವ್/ಶಿವಮೊಗ್ಗ,.12 


ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೈಕ್ವಾಂಡೋ ಸ್ಪರ್ಧೆಯಲ್ಲಿ ಶಿವಮೊಗ್ಗದ ಕ್ರೀಡಾಪಟುಗಳು ೮ ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಶಿವಮೊಗ್ಗ ಟೈಕ್ವಾಂಡೋ ಕಾರ್ಯದರ್ಶಿ ಮೀನಾಕ್ಷಿ ಆರ್. ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಟೈಕ್ವಾಂಡೋ ಅಸೋಸಿಯೇಷನ್‌ನ ಕಾರ್ಯದರ್ಶಿ ಸಿ.ಎ. ಶಶಿವರ್ಧನ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ೪೧ನೇ ರಾಜ್ಯಮಟ್ಟದ ಟೈಕ್ವಾಂಡೋ ಅಧಿಕೃತ ಚಾಂಪಿಯನ್‌ಶಿಫ್‌ನಲ್ಲಿ ಶಿವಮೊಗ್ಗದ ೧೮ ಮಕ್ಕಳು ಭಾಗವಹಿಸಿದ್ದು, ೨ ಚಿನ್ನ, ೨ ಬೆಳ್ಳಿ ಹಾಗೂ ೪ ಕಂಚುಪದಕಗಳನ್ನು ಪಡೆದಿದ್ದಾರೆ ಎಂದರು.

ಟೈಕ್ವಾಂಡೋ ಕ್ರೀಡೆ ಓಲಂಪಿಕ್ ಕ್ರೀಡೆ ಹಾಗೂ ಸ್ವರಕ್ಷಣಾ ತರಬೇತಿಯಾಗಿದ್ದು, ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ದಿನಗಳಲ್ಲಿ ಕ್ರೀಡಾ ಮೀಸಲಾತಿ ಹುದ್ದೆಗಳಿಗೆ ಪ್ರಯೋಜನವಾಗಲಿದೆ. ಶಿವಮೊಗ್ಗದಲ್ಲಿ ೩ ಶಾಖೆಗಳಿದ್ದು, ಅಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಇಂಚನಾ,ಸಿAಚನಾ, ಸವಿತಾ, ಸ್ವಪ್ನ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ