ಸುದ್ದಿಲೈವ್/ಶಿರಾಳಕೊಪ್ಪ
ಪಟ್ಟಣದ ಹತ್ತಿರವಿರುವ ಉಡುಗಣಿ ಅಕ್ಕಮಹಾದೇವಿ ದೇವಸ್ಥಾನ ಹತ್ತಿರವಿರುವ ನೀರಿನ ಕೊಳಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಭಾನುವಾರ ಮಧ್ಯಾಹ್ನ ಶಿರಾಳಕೊಪ್ಪ ಪಟ್ಟಣದ ಗಡಂಗಡಕೇರಿ ನಿವಾಸಿ ತಾಹಿರ್(21) ಎಂಬ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಪಟ್ಟಣದಿಂದ ಕೇವಲ 3 ಕಿಲೋ ಮೀಟರ್ ದೊರದಲ್ಲಿರುವ ಉಡುಗಣಿ ಅಕ್ಕಮಹಾದೇವಿ ದೇವಸ್ಥಾನದ ಒಳ ಭಾಗದಲ್ಲಿ ಇತ್ತೀಚಿಗೆ ನಿರ್ಮಾಣ ಗೊಂಡಿರುವ ನೀರಿನ ಕಲ್ಯಾಣಿಯಲ್ಲಿ ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತನೊಂದಿಗೆ ಆ ಜಾಗಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾನೆ. ಸ್ಥಳೀಯರು ಕೊಡಲೇ ರಕ್ಷಿಸಲು ಪತ್ರಯತ್ನ ಪಟ್ಟರೊ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಿ ಎಸ್ ಐ ಪ್ರಶಾಂತ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ