ಭಾನುವಾರ, ಆಗಸ್ಟ್ 25, 2024

ಒಂದು ಗಾಂಜಾ ಪ್ರಕರಣ-ಇಡೀ ಆರೋಗ್ಯ ಇಲಾಖೆಯ ಗುಟ್ಟನ್ನೇ ಬಿಚ್ಚಿಟ್ಟಿತು!




ಸುದ್ದಿಲೈವ್/ಭದ್ರಾವತಿ


ತಾಲೂಕಿನ ಅರಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 



ಅರಹಳ್ಳಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸಿತ್ತಿರುವುದನ್ನ ಗಮನಿಸಿದ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬರನ್ನ ಹಿಡಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನ ಗ್ರಾಮಸ್ಥರು ಹಿಡಿದು ಮತ್ತೆ ಪೊಲೀಸರಿಗೆ ನೀಡಿದ್ದಾರೆ. ಇದಲ್ಲಿ ಜಬೀ (19) ಎಂಬ ಯುವಕನಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. 


ಅನ್ವರ್ ಕಾಲೋನಿಯ ಮೊಹಮದ್ ಜಬೀಗೆ ಗಾಂಜಾ ಪಾಸಿಟಿವ್ ಬಂದಿದೆ. ಅಣ್ಣನಗರದ ಸಂಜಯ್(19), ಮತ್ತೀರ್ವ ಓಡಿಹೋಗಿದ್ದಾನೆ. 


ಮೆಗ್ಗಾನ್ ಮತ್ತು ಭದ್ರಾವತಿ ಅಸ್ಪತ್ರೆಗಳಲ್ಲಿ ಕಿಟ್ ಖಾಲಿಯಾಗಿದೆಯಾ?


ಗಾಂಜಾ ಸೇವಿಸಿದವರನ್ನ ಪತ್ತೆಹಚ್ಚುವ ಕಿಟ್ ಖಾಲಿಯಾಗಿದೆಯಾ ಎಂಬ ಅನುಮಾನಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಿಟ್ ಖಾಲಿಯಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. 


ಸರಿ ಎಂದು ಮೆಗ್ಗಾನ್ ಗೆ ಇಬ್ಬರು ಯುವಕರನ್ನ ಕರೆದುಕೊಂಡು ಬಂದಿದ್ದಾರೆ. ಇಬ್ಬರಲ್ಲಿ ಒಬ್ಬನಿಗೆ ಪರೀಕ್ಷಿಸಲಾಗಿದೆ. ಒಬ್ಬನಿಗೆ ಪಾಸಿಟಿವ್ ಬಂದಿದೆ. ಇನ್ನೊಬ್ಬನಿಗೆ ಪರೀಕ್ಷಿಸಲು ಕಿಟ್ ಖಾಲಿಯಾಗಿದೆ.


ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ ಜಿಲ್ಲಾ ಸರ್ಜನ್ ಡಾ.ಸಿದ್ಷನಗೌಡ, ಗಾಂಜಾ ಪತ್ತೆಹಚ್ಚುವ ಕಿಟ್ ಡಾ.ರಾಜೇಶ್ ಸುರಗೀಹಳ್ಳಿಯವರು 2000 ಸಾವಿರ ಕಿಟ್ ಕೊಟ್ಟಿದ್ದರು. 2000 ಕಿಟ್ ಗಳು ಖಾಲಿಯಾಗಿವೆ. ವಾರಕ್ಕೆ 4-5 ಜನರಿಗೆ ಮೆಗ್ಗಾನ್ ನಲ್ಲಿ ಕಿಟ್ ಖಾಲಿಯಾಗುತ್ತದೆ ಎಂದರು. 


ಗಾಂಜಾ ಪತ್ತೆ ಮಾಡುವ ಕಿಟ್ ನ್ನ  ಮೆಡಿಸಿನ್ ನಲ್ಲಿ ತರಿಸಿಕೊಳ್ಳಲು ಅವಕಾಶವಿಲ್ಲ. ಇದನ್ನ ಜಿಲ್ಲಾ ಆರೋಗ್ಯ ಇಲಾಖೆ ತರಸಿಕೊಡಬೇಕು. ಇಲ್ಲಾ ಪೊಲೀಸ್ ಇಲಾಖೆ ಕೊಡಬೇಕು. ಒಬ್ಬನಿಗೆ ಗಾಂಜಾ ಪತ್ತೆ ಮಾಡಲು 350-400 ಖರ್ಚಾಗಲಿದೆ. ಈಗಿನ ಡಿಹೆಚ್ ಒ ಅವರು ಒಂದು ಕಿಟ್ ನ್ನೂ ಮೆಗ್ಗಾನ್ ಗೆ ಕೊಡಿಸಿಲ್ಲ ಎಂಬ ಮಾತು ಕೇಳಿ ಬಂದಿದೆ. ಇನ್ನು ಇದಕ್ಕೆ ಹೇಗೆ ಪರಿಹಾರ ಸಿಗಲಿದೆ ಕಾದು ನೋಡಬೇಕು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ