ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆ ಸ್ಪರ್ಧೆಯ ವೇಳೆ ಹೊಂದಾಣಿಕೆ ರಾಜಕಾರಣ ಮತ್ತು ಕುಟುಂಬ ಮುಕ್ತ ವಿರುದ್ಧ ಸ್ಪರ್ಧಿಸಿದ್ದೆ. ಇಂದು ಆ ವಿಷಯ ಸ್ಪಷ್ಟವಾಗಿ ಕಾಣ್ತಾ ಇದೆ ಎಂದು ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜೇಂದ್ರ ಕಾಂಗ್ರೆಸ್ ನ ಋಣದಲ್ಲಿದ್ದೀಯ ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ. ಇದು ಹೊಂದಾಣಿಕೆ ರಾಜಕಾರಣವಲ್ಲದೆ ಮತ್ತಿನ್ನೇನು? ಡಿಕೆಶಿ ನೇರವಾಗಿ ಹೊಂದಾಣಿಕೆಯನ್ನ ಒಪ್ಪಿಕೊಂಡಂತಾಗಿದೆ. ನಾನು ಚುನಾವಣೆಯಲ್ಲಿ ಹೋರಾಡಿದ್ದು ಇದೇ ವಿಷಯದಲ್ಲಿ ಎಂದು ತಿಳಿಸಿದರು.
ಈ ಬಗ್ಗೆ ವಿಜೇಂದ್ರ ಮತ್ತು ರಾಘವೇಂದ್ರ ಆಕ್ಷೇಪಿಸಿಲ್ಲ. ಹಾಗಾಗಿ ಡಿಕೆಶಿ ಮಾತ್ರ ಒಪ್ಪಿದಂತಾಗಿದೆ. ಹೊಂದಾಣಿಕೆಯನ್ನ ಖಂಡಿಸಿದ್ದೀವಿ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಆಯಾ ಪಕ್ಷಗಳು ಅನ್ಯಾಯ ಮಾಡಿದ್ದಾರೆ. ನಿಮ್ಮಿಬ್ಬರಿಗೂ ಸಿದ್ದಾಂತವಿಲ್ಲ. ತಮ್ಮ ಹಿತಾಸಕ್ತಿಯನ್ನ ಕಾಪಾಡಲು ಕಾರ್ಯಕರ್ತರನ್ನ ಬಲಿ ಕೊಡಬೇಡಿ. ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ನಾಳೆ, ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಸ್ಬಾಮಿಗಳು ಸಂಜೆ ಮನೆಗೆ ಬಂದು ಶ್ರಾವಣ ಚಿಂತನ ಕಾರ್ಯಕ್ರಮ ನಾಳೆ ನಮ್ಮನೆಯಲ್ಲಿ ನಡೆಯಲಿದೆ ಎಂದರು.
ಆಶ್ರಯ ಮನೆಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. 288 ಮನೆಗಳನ್ನ ಹೊರತು ಪಡಿಸಿ ಯಾವುದೇ ಮನೆಹಂಚಿಲ್ಲ. ವಸತಿ ಸಚಿವರ ಕಡೆಯಿಂದ ಅಧಿಕಾರಿಗಳು ಬಂದಿದ್ದಾರೆ. ಈ ಮನೆಗಳಿಗೆ ನೀರು ಇಲ್ಲ ದೀಪ ಇಲ್ಲವಾಗಿದೆ. 600ಮನೆ ಹಂಚುವ ಬಗ್ಗೆ ಅಧಿಕರಿಗಳು ಹೇಳಿದ್ದಾರೆ. ಅದನ್ನ ಆಕ್ಷೇಪಿಸಿದ್ದೇನೆ. ಆಗಸ್ಟ್ ಕೊನೆಯಲ್ಲಿ 600 ಮನೆ ಹಂಚುವ ಭರವಸೆ ನೀಡಿದ್ದಾರೆ ಎಂದರು.
3000 ಮನೆ ಯಾವಾಗ ಮುಗಿಸುತ್ತಾರೆ ಎಂಬುದು ಗೊತ್ತಿಲ್ಲ. ಇದರಲ್ಲಿ 600 ಮನೆ ಹಂಚಲು ಮುಂದಾಗಿದ್ದಾರೆ. ಯಾವ ಸೌಕರ್ಯಗಳಿಲ್ಲದೆ ಮನೆ ನಿರ್ಮಾಣವಾಗುತ್ತಿದೆ. ಹಾಗಾಗಿ 3000 ಮನೆಯನ್ನ ಬೇಗ ನಿರ್ಮಿಸಿ ಮೂಲಬೂತ ಸೌಕರ್ಯ ನೀಡಬೇಕು ಎಂದು ಹಿಂದೂ ಹುಲಿ ಈಶ್ವರಪ್ಪ ಆಗ್ರಹಿಸಿದರು.
ಪ್ರತಿಭಟನೆ
ಕಟ್ಟಡ ಕಾರ್ಮಿಕರಿಗೆ ಸೌಲಭ್ಯವನ್ನ ರಾಜ್ಯ ಸರ್ಕಾರ ನೀಡಬೇಕು. ವಾಲ್ಮಿಕಿ ಅಭಿವೃದ್ಧಿ ಹಣವನ್ನ ಬಿಡುಗಡೆ ಮಾಡಬೇಕು. ಪಾಲಿಕೆ ಚುನಾವಣೆ ನಡೆಸಬೇಕು. ಸುಪ್ರೀಂ ಚುನಾವಣೆ ನಡೆಸಲು ಸೂಚಿಸಿದೆ. ಸುಪ್ರೀಂ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿ ಆ.13 ರಂದು ದೈವಜ್ಞ ಕಲ್ಯಾಣ ಮಂದಿರ ವೃತ್ತದಿಂದ ಗೋಪಿ ವೃತ್ತ, ನೆಹರೂ ರಸ್ತೆ ಶಿವಪ್ಪ ನಾಯಕ ಪ್ರತಿಮೆ ಮೂಲಕ ನಗರ ಪಾಲಿಕೆಗೆ ಪ್ರತಿಭಟನಾ ಮೆರವಣಿಗೆಯನ್ನ ರಾಷ್ಟ್ರಭಕ್ತರ ಬಳಗದಿಂದ ನಡೆಯಲಿದೆ ಎಂದರು.
ಚುನಾವಣೆ ನಡೆಸಿ
ಪಾಲಿಕೆ ಚುನಾವಣೆ ನಡೆಸಲು ಚುನಾವಣೆ ಆಯೋಗ ನೋಟಿಫಿಕೇಷನ್ ಹೊರಡಿಸುವುದು ಸ್ವಾಗತಾರ್ಹ. ಯಾವುದೇ ಕಾರಣಕ್ಕು ಚುನಾವಣೆ ಮುಂದಾಗಬಾರದು ಎಂದ ಅವರು ಚುನಾವಣೆ ಘೋಷಣೆ ಆದ ನಂತರ ಸಭೆ ನಡೆಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಸ್ಪರ್ಧಿಸುವ ಬಗ್ಗೆ ನಿರ್ಧಾರಿಸಲಾಗುವುದು ಎಂದರು.
ಬಿಜೆಪಿಗೆ ಸೇರುವ ಬಗ್ಗೆ ಅನೇಕ ಕರೆ ಬರ್ತಾ ಇದೆ. ಆದರೆ ಚರ್ಚೆ ನಡೆದ ನಂತರ ಪಕ್ಷ ಸೇರ್ಪಡೆ ಎಂದು ಘೋಷಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ