ಸುದ್ದಿಲೈವ್/ಶಿವಮೊಗ್ಗ
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಪ್ರೀತಿಸಿ ಮದುವೆಯಾದರೂ ಗಂಡ ಹೆಂಡತಿಯರ ನಡುವೆ ಬಿರುಕು ಮೂಡಿತ್ತು. ವಾಸಿಂ ಅಕ್ರಂ (30) ನೇಣು ಬಿಗಿದುಕೊಂಡ ದುರ್ದೈವಿಯಾಗಿದ್ದಾನೆ. ಐದು ತಿಂಗಳ ಹಿಂದಷ್ಟೆ ವಾಸಿಂ ಅಕ್ರಂ ಮದುವೆಯಾಗಿದ್ದರು. ಐದು ತಿಂಗಳಲ್ಲೇ ಪ್ರೀತಿಸಿ ವರಿಸಿದ ಪತ್ನಿಯ ಜೊತೆ ಜಗಳ ಉಂಟಾಗಿತ್ತು.
ಕೂಲಿ ಕೆಲಸ ಮಾಡಿಕೊಂಡಿದ್ದ ವಾಸಿಂ ಅಕ್ರಂ ಇಂದು ಬೆಳಿಗ್ಗೆ ಕಲ್ಲೂರಿನ ಆಶ್ರಯ ಬಡಾವಣೆಯಲ್ಲಿರುವ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಾಸಿಂ ಅಕ್ರಂ ಪತ್ತೆಯಾಗಿದ್ದಾನೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ