ಸುದ್ದಿಲೈವ್/ಶಿವಮೊಗ್ಗ
ಅರಣ್ಯ ಸಾಗುವಳಿ ಮಾಡುವರ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಇನ್ನುಮುಂದೆ ಕೇಂದ್ರದವರು ಇವರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಸಂಸದರಲ್ಲಿ ಈ ಕಮಿಟ್ ಮೆಂಟ್ ಕಾಣಿಸುತ್ತಿಲ್ಲ. ಆಸ್ಪತ್ರೆಯಲ್ಲಿದ್ದರೂ ಕಾಗೋಡು ತಿಮ್ನಪ್ಪನವರು ತಮ್ಮನ್ನ ನೋಡಲು ಹೋದ ರಾಜಕೀಯ ಮುಖಂಡರಿಗೆ ಅರಣ್ಯ ಸಾಗುವಳಿದಾರರ ಪರವಾಗಿ ಮಾಹಿತಿ ಪಡೆಯುವ ಕಮಿಟ್ ಮೆಂಟ್ ಅವರಲ್ಲೊ ಕಾಣಬಹುದು ಅದನ್ನ ಸಂಸದರಲ್ಲಿ ಸಾಧ್ಯವಿಲ್ಲ ಎಂದರು.
ಕಳೆದ ಬಾರಿ ಬಿಜೆಪಿಯಿಂದಲೇ ಅರಣ್ಯ ಸಾಗುವಳಿದಾರರಿಗೆ ಸಮಸ್ಯೆಯಾಗಿದೆ. ಬಿಜೆಪಿ ಕಾನೂನು ತಂದರೆ ಜನರ ವಿರುದ್ಧವೇ ತರುವುದರಿಂದ ಜನರ ಅತಂತ್ರತೆಗೆ ಕಾರಣವಾಗಿದೆ. ಜಲಾಶಯದ ನಿರ್ಮಾಣದಿಂದಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ರಕ್ಷಣೆ ಮಾಡಲಾಗುತ್ತಿದೆ. ಉಳಿದ ಕೆಲಸವನ್ನ ಕೇಂದ್ರ ಸರ್ಕಾರ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ನಿಲ್ಲಬೇಕಿದೆ. ಇಲ್ಲೂ ರಾಜಕೀಯ ಮಾಡಿದರೆ ಅವರನ್ನ ದೇವರೇ ಕಾಪಾಡಬೇಕು ಎಂದರು.
ಮೂಡಾ ಹಗರಣದ ವಿಚಾರದಲ್ಲಿ ಪಾದಯತ್ರೆಗೆ ವಿಪಕ್ಷಗಳು ಮುಂದಾಗಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಹಗರಣವಾಗಿದ್ದಕ್ಕೆ ತಪ್ಪಿತಸ್ಥರನ್ನ ಕ್ರಮ ಕೂಗೊಂಡರೂ ವಿಪಕ್ಷಗಳು ಆರೋಪ ಮಾಡಲು ಮುಂದಾಗಿವೆ. ಬಿ.ವೈ ವಿಜೇಂದ್ರ ಕೇವಲ ಸಿಎಂ ವಿರುದ್ಧ ಮಾತ್ರವಲ್ಲ, ನನ್ನ ವಿರುದ್ಧವೂ ಹಗೂರವಾಗಿ ಮಾತನಾಡಿದ್ದಾರೆ.
ಯತ್ನಾಳ್ ಎತ್ತಿರುವ ವಿಷಯಗಳ ಬಗ್ಗೆ ಅವರು ಮಾತನಾಡದೆ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ನಮ್ಮ ತಂದೆಯವರ ಮೇಲೆ ಆರೋಪ ಬಂದಿತ್ತು. ಎದುರಿಸಿದ್ದೇವೆ. ನೀತಿಗೆಟ್ಟ ವಿಚಾರದ ಬಗ್ಗೆ ವಿಜೇಂದ್ರ ಮಾತನಾಡುತ್ತಾರೆ. ಅವರ ವಿರುದ್ಧವೇ ಭ್ರಷ್ಠಾಚಾರ, ದೌರ್ಜನ್ಯದ ಆರೋಪವಿದೆ. ಆದರೆ ಸಿದ್ದರಾಮಯ್ಯನವರ ಮತ್ತು ಡಿಕೆಶಿ ವಿರುದ್ಧ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ. ಡಿಕೆಶಿಯನ್ನ ಜೈಲಿಗೆ ಹಾಕಿಸುವಲ್ಲಿ ಯಡಿಯೂರಪ್ಪನವರ ಪಾಲು ಇದೆ ಎಂದು ಗುಡುಗಿದರು.
ಸಿದ್ದರಾಮಯ್ಯನವರ ವಿರುದ್ಧ ವಿಪಕ್ಷಗಳು ಭಾರಿ ಮಾತನಾಡುತ್ತಿವೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿದ್ದಾಗ ಮೂಡಾ ವಿಚಾರದಲ್ಲಿ ವಿಜಯ ರಾಜೀವ್ ಎಂಬುವರು ಬೋರ್ಡ್ ಅಧ್ಯಕ್ಷರಾಗಿದ್ದರು. ಅದನ್ನ ವಿಜೇಂದ್ರರೇ ಹ್ಯಾಂಡಲ್ ಮಾಡಿದ್ದರು. ಕುಮರಸ್ವಾಮಿ, ಯಡಿಯೂರಪ್ಪನವರು ಮೂಡಾ ಅಧ್ಯಕ್ಷರಾಗಿದ್ದರು. ಅವರೆಲ್ಲರೂ ನಿವೇಶನ ಪಡೆದಿದ್ದರು. ಸಿಎಂ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ನಾವು ಸಿಎಂ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
2009 ರಲ್ಲಿ ಯಡಿಯೂರಪ್ಪನವರು ಜೈಲ್ ಗೆ ಹೋಗಿದ್ದೂ ಸಹ ವಿಜೇಂದ್ರರಿಂದ, ಮತ್ತೆಸಿಎಂ ಆದ ಬಿಎಸ್ ವೈನ್ನ 2021 ರಲ್ಲಿ ಇಳಿಸಲಯಿತು. ಅದಕ್ಕೂ ಬಿ.ವೈ ವಿಜೇಂದ್ರರೇ ಕಾರಣ. ಪ್ರಜಾಪ್ರಭುತ್ವದಲ್ಲಿ ರಾಜ್ಯದ ಪಾಲನ್ನ ಪಡೆಯಲು ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿ ಫೈಟ್ ಮಾಡಲಾಯಿತು. ಹಣ ಬಂತು. ಬೇರೆ ರಾಜ್ಯಗಳಿಗೆ ಹಣ ಬರಲೇ ಇಲ್ಲ ಕಾರಣ ಅವರು ನ್ಯಾಯಾಲಯಕ್ಕೆ ಹೋಗಲಿಲ್ಲ ಅದಕ್ಕೆ ಹಣ ಬರಲಿಲ್ಲ ಎಂದರು.
ಹಿಂದೂಳಿದ ವರ್ಗಗಳ ಸಿಎಂ ಆದರೆ ಅವರನ್ನ ಅಧಿಕಾರದಿಂದ ಇಳಿಸುವ ಷಡ್ಯಂತ್ರಗಳು ನಡೆದಿವೆ. ಬಂಗಾರಪ್ಪ, ಸಿದ್ದರಾಮಯ್ಯನವರನ್ನ ಇಳಿಸುವ ಪ್ರಯತ್ನ ನಡೆಯಿತು. ಕೇಜ್ರಿವಾಲ್ ಸುರೇನ್,ಮಾಯಾವತಿ ಇವರಿಗೆ ತೊಂದರೆ ನೀಡಲಾಯಿತು. ಈಗ ಸಿದ್ದರಾಮಯ್ಯನವರ ವಿರುದ್ಧ ಬಂದಿದ್ದಾರೆ. ಅದನ್ನ ಸಮರ್ಪಕವಾಗಿ ಎದುರಿಸುತ್ತೇವೆ ಎಂದರು.
ವಾಜಪೇಯಿ ಲೇಔಟ್ ನ ಹಗರಣ, ಜಂಕ್ಷನ್ ನಲ್ಲಿ ಯಡಿಯುರಪ್ಪ ನವರ ಜಾಗವನ್ನ ಅರಣ್ಯ ಒತ್ತುವರಿಯಿಂದ ಮಾಡಿರುವ ಬಗ್ಗೆ, ಗಾರ್ಮೆಂಟ್ ನ ಜಾಗವನ್ನ 192 ಎ ಸೆಕ್ಷನ್ ಹಾಕಿ ರೈತರ ಭೂಮಿಯನ್ನ ಬಲವಂತವಾಗಿ ಒಕ್ಜಲೆಬ್ಬಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳಿವೆ. ಇವುಗಳ ತನಿಖೆಗೂ ನಾವು ಮುಂದಾಗುತ್ತೇವೆ. ಭ್ರಷ್ಠಾಚಾರದಲ್ಲಿ ಬಿಜೆಪಿಯ ಅಧ್ಯಕ್ಷರೇ ನಂಬರ್ ಒನ್ ಆಗಿದ್ದಾರೆ ಎಂದರು.
ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಡಿಕೆಶಿಯವರ ಕುಮ್ಮಕ್ಕು ಎಂದು ಬಿಜೆಪಿ ಹೇಳುತ್ತಿದೆ. ಡಿಕೆಶಿ ಯಾಕೆ ಮಾಡ್ತಾರೆ. ಆದರೆ ಡಿಕೆಶಿ ಜೈಲಿಗೆ ಹೋಗಲು ಯಡಿಯೂರಪ್ಪನವರೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅದನ್ನ ನಾನೇ ನೋಡಿದ್ದೀನಿ ಎಂದರು.
ಶರಾವತಿ ಪಂಪ್ಡ್ ಹೌಸ್ ನಿಂದ 2000 ಯುನಿಟ್ ತಯಾರಿಸಲು ಕೇಂದ್ರ ಅನುಮತಿ ನೀಡಿರುವುದು ಸ್ವಾಗತಾರ್ಹವಾಗಿದೆ. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಆಯನೂರು ಮಂಜುನಾಥ್, ಡಿಸಿಸಿಬ್ಯಾಂಕ್ ಅಧ್ಯಕ್ಷ ಆರ್ ಮಂಜುನಾಥ್ ಗೌಡ, ಗ್ಯಾರೆಂಟಿ ಮಮಸಮಿತಿ ಅಧ್ಯಕ್ಷ ಚಂದ್ರಭೂಪಾಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ, ಮರಿಯಪ್ಪ, ಸಂತೇಕಡೂರು ವಿಜಯಣ್ಣ, ಜಿಡಿ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ