ಸುದ್ದಿಲೈವ್/ಶಿವಮೊಗ್ಗ
ತುಂಗ ಜಲಾಶಯದ ರೋಪ್ ಮತ್ತು ಸಿಲ್ಟು ಮತ್ತು ಮರಳನ್ನ ತೆಗೆಯುವ ಕೆಲಸ ಆಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ತುಂಗಭದ್ರ ಡ್ಯಾಂ ಅನಾಹುತ ನೋಡಿದ್ದೀವಿ. ಶಿವಮೊಗ್ಗ 1952 ರಲ್ಲಿ ಗಾಜನೂರು ಡ್ಯಾಂ ಪ್ರಾರಂಭವಾಯಿತು. ಆದರೆ 2009 ರಲ್ಲಿ ಡ್ಯಾಂ ಲೋಕಾರ್ಪಣೆಯಾಗಿದೆ. 3.24 ಟಿಎಂಸಿ ನೀರು ಸಂಗ್ರಹವಾಗುವ ಸಣ್ಣ ಜಲಾಶಯಿದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
22 ಗೇಟ್ ಇದ್ದು ಇದರಲ್ಲಿ ಒಂದು ಗೇಟ್ ಎತ್ತಕ್ಕೆ ಈಬಾರಿ ಸಾಧ್ಯವಾಗಲಿಲ್ಲ. ರೋಪ್ ಸಮಸ್ಯೆ ಇದೆ. ಗಾಜನೂರಿನದ್ದು ರೋಪ್ ನ ವ್ಯವಸ್ಥೆ ಆದರೆ, ಹೊಸೇಟೆಯ ತುಂಗಭದ್ರ ಚೇನ್ ಗೇಟ್ ಮುರಿದು ಬಿದ್ದಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವಾಗಿದ್ದು ಇದನ್ನ ಸರಿಯಾಗಿ ನಿರ್ವಹಿಸಬೇಕಿದೆ ಎಂದು ಆಗ್ರಹಿಸಿದರು.
ನಾನು ಶಾಸಕನಾಗಿದ್ದಾಗ ಸಿದ್ದುನ್ಯಾಮೇಗೌಡ ನೇತೃತ್ವದಲ್ಲಿ ಗಾಜನೂರಿನ ಜಲಾಶಯವನ್ನ ಪರಿಶೀಲನೆ ನಡೆಸಿದಾಗ ಸಿಲ್ಟು ಮಮತ್ತು ಮರಳನ್ನ ತೆಗೆಯುವಂತೆ ಪ್ರಸ್ತಾಪನೆ ಬಂದಿತ್ತು. 2009 ರಿಂದ ಇಲ್ಲಿಯ ವರೆಗೆ ಏನೂ ಕ್ರಮವಾಗಿಲ್ಲ. ಈಗಲೂ ಜಲಾಶಯಕ್ಕೆ ತೊಂದರೆ ಆಗದೆ ಸಿಲ್ಟು ಮತ್ತು ಮರಳನ್ನ ತೆಗೆಯುವ ವ್ಯವಸ್ಥೆಯನ್ನ ಮಾಡಬೇಕು ಎಂದು ಒತ್ತಾಯಿಸಿದರು.
ತುಂಗ ಜಲಾಶಯದಲ್ಲಿ ಅರಣ್ಯ ಸೇರಿದಂತೆ ಹಲವಾರು ಇಲಾಖೆಗಳ ಎನ್ ಒಸಿ ಬೇಕಿದೆ. ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಇಲ್ಲಿಂದ ಪ್ರಕ್ರಿಯೆಗಳು ಆರಂಭವಾಗಲಿ ಎಂದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 24×7 ಪೈಪ್ ಲೈನ್ ಇದೆ. ಬಿಬಿ ಸ್ಟ್ರೀಟ್ ನಲ್ಲಿ ಹೊಸ ನೀರಿನ ಕನೆಕ್ಷನ್ ನೀಡಲಾಗಿದೆ ಹಳೇ ಕನೆಕ್ಷನ್ ಬಂದ್ ಮಾಡಲಾಗಿದೆ. ಆದರೆ ಕೆಲ ಮನೆಗಳಲ್ಲಿ ಕುಡಿಯುವ ನೀರು ಬರ್ತಯಿಲ್ಲ. ಆರಂಭದಲ್ಲಿ ಮನೆಯ ಮೇಲಿನ ತೊಟ್ಟಿಗೆ 24×7 ನೀರು ತಲುಪಲಿದೆ ಎಂದು ಬಿಂಬಿಸಲಾಗಿತ್ತು. ಆದರೆ ಕೆಳತೊಟ್ಟಿಗೆನೇ ನೀರು ತುಂಬುತ್ತಿಲ್ಲ ಎಂದರು.
ಪಾಲಿಕೆಯ ಚುನಾವಣೆ ಆಗಬೇಕಿದೆ. ವಾರ್ಡ್ ವಿಂಗಡನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಡಿಸಿ 4 ಬಾರಿ ಪತ್ರ ಬರೆದರೂ ಪಾಲಿಕೆ ಆಯುಕ್ತರಿಂದ ಯಾವುದೇ ಉತ್ತರವಿಲ್ಲ. ನಾಲ್ಕು ಪತ್ರಕ್ಕೂ ಉತ್ತರ ಬಂದಿಲ್ಲ. ಚುನಾವಣೆ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ಆರೋಪಿಸಿದರು.
ಕೆಲ ಗ್ರಾಮಗಳು ಪಾಲಿಕೆಗೆ ಸೇರಿಸಬೇಕೆಂಬ ಪ್ರಕ್ರಿಯೆ ನಡೆಯಬೇಕು. ಕೆಲ ಗ್ರಾಪಂ ನ ಅವಧಿ ಬಾಕಿ ಇದೆ. ಹೊಸ ವ್ಯವಸ್ಥೆ ಸರಿಯಿದ್ದರೆ ಹಳೆ ವ್ಯವಸ್ಥೆ ರದ್ದುಗೊಳಿಸಿ ಇಲ್ಲವಾದಲ್ಲಿ ಹಳೇ ವ್ಯವಸ್ಥೆಯಲ್ಲೇ ಚುನಾವಣೆ ನಡೆಯಿಸಿ. ನಗರಾಭಿವೃದ್ಧಿ ಸಚಿವರಿಗೆ ಕೆಲವರು ಮನವಿ ನೀಡಿದ್ದಾರೆ. ಸಚಿವರ ಶಿವಮೊಗ್ಗಕ್ಕೆ ಬರುತ್ತೇನೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಸರಿಯಿದ್ದರೆ ಮಾಡಿ ಇಲ್ಲವಾದಲ್ಲಿ ಹಳೇ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಯಿಸಿ ಎಂದು ಆಗ್ರಹಿಸಿದರು.
ಜಾಂಡೀಸ್ ಹೆಚ್ಚಳವಾಗಿದೆ. ಕೊಳಚೆ ನೀರಿನಿಂದ ಜಾಂಡೀಸ್ ಹರಡಲಿದೆ. ಕ್ರಿಸ್ಟಲ್ ಕ್ಲಿಯರ್ ನೀರು ಕೊಡುವುದಾಗಿ ಹೇಳಿ 24×7 ನೀರು ಒದಗಿಸಲಿದೆ ಎಂದಿದ್ದರು. ಯಾವುದೇ ಕ್ರಿಸ್ಟಲ್ ಕ್ಲಿಯರ್ ಕಾಣುತ್ತಿಲ್ಲ ಜಾಂಡೀಸ್ ಹೆಚ್ಚಾಗಿದೆ. ಈ ಸಮಸ್ಯೆ ವಿಚಾರಿಸಿದರೆ ವಾರ್ ಬೋರ್ಡ್ ಸಮಸ್ಯೆ ಎನ್ನುತ್ತಾರೆ. ಹಾಗಾಗಿ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಯ್ಕೆಯಾಗಬೇಕಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ಜೆಡಿಎಸ್ ನ ದೀಪಕ್ ಸಿಂಗ್, ದಯಾನಂದ್, ನರಸಿಂಹ ಗಂಧದ ಮನೆ ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ