ಸುದ್ದಿಲೈವ್/ಶಿವಮೊಗ್ಗ
ನಗರದ ಡಿಎಆರ್ ಸಭಾಂಗಣದಲ್ಲಿ ಗೌರಿ ಗಣೇಶ ಮತ್ತು ಮಿಲಾದ್ ಹಬ್ಬ ಆಚರಣೆ ಕುರಿತಂತೆ ಇಂದು ಶಾಂತಿ ಸಭೆ ನಡೆದಿದೆ.
ಶಾಸಕ ಚೆನ್ನಬಸಪ್ಪ ಮಾತನಾಡಿ, ಗಣೇಶ ಹಬ್ಬ ಸ್ವಾತಂತ್ರ್ಯದ ಹೋರಾಟದ ಹಬ್ಬವಾಗಿ ಲೋಕನಾಥ್ ಬಾಲಗಂಗಾಧರ್ ತಿಲಕ್ ರಿಂದ ಆರಂಭವಾದ ಹಬ್ಬವಾಗಿದೆ. ಕಳೆದ ವರ್ಷ ಗಣಪತಿ ಉತ್ಸವ ಮತ್ತು ಈದ್ ಮಿಲಾದ್ ಹಬ್ಬ ವಿಜೃಂಭಣೆಯಾಗಿ ನಡೆದಿದೆ.
ಘಟನೆ ನಡೆಯಬಾರದು ಎಂದು ಎಲ್ಲಾ ನಾಯಕರ ಅಪೇಕ್ಷೆ ಇದ್ದರು ಕೆಲ ಕಿಡಿಗೇಡಿಗಳಿಂದ ಅಚಾತುರ್ಯ ನಡೆದಿದೆ. ಪೊಲೀಸ್ ಇಲಾಖೆ ಶಾಂತಿ ಭಂಗ ತರುವವರ ವಿರುದ್ಧ ಕ್ರಮ ತಗೆದುಕೊಳ್ಳಲಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಮತ್ತು ಮಿಲಾದ್ ಹಬ್ಬ ಬಂದಾಗ ಕ್ರಮ ಎನ್ನುವುದು ಬೇಡ, ಇದು ನಿರಂತರವಾಗಿ ನಡೆದರೆ ಮಾತ್ರ ಸಾಧ್ಯವಾಗಲಿದೆ ಎಂದರು.
ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಯಾವುದೇ ಹಬ್ಬವಿರಲಿ ಅವರವರ ಹಬ್ಬ ಅವರಿಗೆ ವಿಶೇಷವಾಗಿರುತ್ತದೆ. ಹಬ್ಬವನ್ನ ಸ್ಪರ್ಧೆಗೆ ಇಳಿದು ಆಚರಿಸದಂತೆ ಕರೆ ನೀಡಿದರು. ಹಬ್ಬವನ್ನ ವಿಜೃಂಭಣೆಯಾಗಿ ನಡೆಸಿ. ಇಲಾಖೆ ಬೆಂಬಲಿಸಲಿದೆ. ರಸ್ತೆಯ ಮೇಲೆ ಗಣಪತಿ ಕೂರಿಸಿದರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಕೆಲವರು ದೂರು ನೀಡಿದಾಗ ಆ ಆಕ್ಷೇಪಣೆಯನ್ನ ಪರಿಶೀಲಿಸಬೇಕಾಗುತ್ತದೆ.
ರಾಗಿಗುಡ್ಡದಲ್ಲಿ ಗಣೇಶ ಮತ್ತು ಮಿಲಾದ್ ಹಬ್ಬವನ್ನ ವಿಜೃಂಭಣೆಯಾಗಿ ಆಚರಿಸಲಾಗಿದೆ. ಅಲ್ಲಿ ನಡೆದ ಗಲಭೆ ನಮಗೆ ಪಾಠವಾಗಬೇಕು. ಕಳೆದ ಬಾರಿ150 ಜನ ಮನೆ ಬಿಟ್ಟವರಲ್ಲಿ 45 ಜನ ಇನ್ನೂ ಮನೆಗೆ ಬಂದಿಲ್ಲ. ಇಲಾಖೆನೇ ಕೆಲವರಿಗೆ ಸಹಕಾರ ಮಾಡಿದೆ. ಕಳೆದ ಬಾರಿ ಒಂದು ತಿಂಗಳು ಬಂದೋಬಸ್ತ್ ಮಾಡಲಾಗಿತ್ತು. ಈ ಕಹಿ ಘಟನೆಗಳಿಂದ ಕಲಿತ ಪಾಠವನ್ನ ಮತ್ತೆ ಮಾಡಬಾರದು ಎಂದು ಸಭೆಗೆ ತಿಳಿಸಿದರು.
ಕಳೆದ ಬಾರಿ 250 ಜನ ರೌಡಿಶೀಟರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತೊಂದರೆ ಮಾಡುವವರನ್ನ ನಮ್ಮ ಗಮನಕ್ಕೆ ತನ್ನಿ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಿಬಿಡಬೇಡಿ. ನಿಮಗೂ ಮಾಹಿತಿ ಬಂದರೆ ಇಲಾಖೆ ಜೊತೆ ಸ್ಪಷ್ಟನೆ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಸಾರ್ವಜನಿಕರಿಗೆ ರಕ್ಷಣ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಬಾರಿ 250 ಸಿಸಿ ಕ್ಯಾಮೆರಾ, ದ್ರೋಣ್ ಕ್ಯಾಮೆರಾ, ವಿಡಿಯೊಗ್ರಫಿ ಮಾಡಲಾಗುತ್ತಿದೆ. 54 ಕಡೆ ಗಣಪತಿ ವಿಸರ್ಜನೆಗೆ ಅವಕಾಶ ಮಾಡಲಾಗಿದೆ. ಸಿಮೆಂಟ್ ಕಿತ್ತುಹೋದರೆ ಅಲ್ಲಿ ಪಾಲಿಕೆ ಸಿಮೆಂಟ್ ಹಾಕಿಸಿಕೊಡಲಾಗುವುದು. 4,500 ಸಾವಿರ ಗಾಂಜಾ ಪ್ರಕರಣಗಳನ್ನ ಈಗಾಗಲೇ ದಾಖಲಿಸಲಾಗುತ್ತಿದೆ ಎಂದರು.
ಗಣಪತಿ ಮತ್ತು ಈದ್ ಹಬ್ಬ ಕಾರ್ಯಕ್ರಮವನ್ನ ಜವಬ್ದಾರಿಯಿಂದ ನಡೆಸೋಣ. ಎರಡು ವರ್ಷದಿಂದ ಒಟ್ಟೊಟ್ಟಿಗೆ ನಡೆಯುತ್ತಿವೆ. ದೈವ ಇಚ್ಛೆಯಂತೆ ನಾವು ಒಂದಾಗಲಿ ಎಂದು ದೇವರು ತೋರಿಸುತ್ತಿರುವ ದಾರಿಯಾಗಿದೆ. ಮುಂದಿನ ಪೀಳಿಗೆಗೆ ತೊಂದರೆಯಾಗದಂತೆ ಆಚರಿಸೋಣ ಎಂದು ಆಶೂರ್ ಖಾನ ಕಮಿಟಿಯ ಕಾರ್ಯದರ್ಶಿ ಅಲ್ತಾಫ್ ಪರ್ವೇಜ್ ತಿಳಿಸಿದರು.
ಜೆಡಿಎಸ್ ನ ಸಿದ್ದಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಕೆಲ ಪೆಂಡಾಲ್ ನವರ ಹಣ ಸಂಗ್ರಹವೇ ಕಡಿಮೆ ಇರುತ್ತದೆ. ಈ ಸಂಗ್ರಹದಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಿಲ್ಲ ಇದರಿಂದ ಇಲಾಖೆ ಹಿಂದೆ ಸರಿಯುವಂತೆ ಕೊರಿದರು. ಮಾಜಿ ಕಾರ್ಪರೇಟರ್ ಸುರೇಖಾ ಮುರಳೀಧರ್ ಮಾತನಾಡಿ ಪೊಲೀಸ್ ಇಲಾಖೆ 40 ವರ್ಷಗಳಿಂದ ರಸ್ತೆಯ ಮೇಲೆ ಪೆಂಡಾಲ್ ಹಾಕಲಾಗಿರುತ್ತದೆ. ಏಕಾಏಕಿ ತೆರವುಗೊಳಿಸದಂತೆ ಮನವಿ ಮಾಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ