ಶನಿವಾರ, ಆಗಸ್ಟ್ 24, 2024

ನಾಯಿ ಕಡಿತ-ಮಹಿಳೆ ಸಾವು



ಸುದ್ದಿಲೈವ್/ಶಿವಮೊಗ್ಗ


ಬೀದಿನಾಯಿಯ ಕಡಿತಕ್ಕೊಳಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಆ. 23 ರಂದು ನಡೆದಿದೆ.


ಹೊಸನಗರ ಪಟ್ಟಣದ  ಎಂ ಗುಡ್ಡೇಕೊಪ್ಪದ ನಿವಾಸಿ ಸಂಗೀತ (38) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರ ಪತಿ ಮೃತರಾಗಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ.


ಕಳೆದ ಸರಿಸುಮಾರು 2 ತಿಂಗಳ ಹಿಂದೆ ಇವರು ತೋಟಕ್ಕೆ ಹೋಗಿ ಬರುವಾಗ, ಬೀದಿ ನಾಯಿಯೊಂದು (stray dog) ಕಚ್ಚಿದೆ . ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.


ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿತ್ತು. ಹೊಸನಗರ ಆಸ್ಪತ್ರೆಗೆ (hosanagara govt hospital) ದಾಖಲಿಸಿದ್ದು, ಈ ವೇಳೆ ನಾಯಿ ಕಡಿತದಿಂದ ರೇಬೀಸ್(rabies) ಉಲ್ಬಣಿಸಿರುವುದು ಪತ್ತೆಯಾಗಿತ್ತು.


ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ