ಬುಧವಾರ, ಆಗಸ್ಟ್ 14, 2024

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಬೃಹತ್ ಮೋಟಾರ್ ರ್ಯಾಲಿ

 


ಸುದ್ದಿಲೈವ್/ಶಿವಮೊಗ್ಗ


ದುರ್ಗಿ ಪ್ರಖಂಡ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಾಳೆ ಸಂಜೆ 5 ಗಂಟೆಗೆ ಬೃಹತ್ ಮೋಟರ್ ಜಾಥವನ್ನ ವಿಶ್ವ‌ಹಿಂದೂ ಪರಿಷತ್ ಮತ್ತು ಬಜರಂಗದಳ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.


ಕೇಸರಿ ಶಾಲು ಮತ್ತು ಕೇಸರಿ ಬಾವುಟವನ್ನ ಹಿಡಿದ ಕಾರ್ಯಕರ್ತರು ಬೈಕ್ ಏರಿ ಜೈ ಜೈ ಭಾರತ ಮಾತ, ಅಖಂಡ ಭಾರತದ ಕಲ್ಪನೆ ಇಟ್ಟುಕೊಂಡು ಈ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.


ಜಾಥವು ವಿಹೆಚ್ ಪಿ ಬಜರಂಗದಳದ ಸಂಯೋಜಕ ರಾಜೇಶ್ ಗೌಡರ ನೇತೃತ್ವದಲ್ಲಿ ನಡೆದಿದೆ.  ರವೀಂದ್ರ ನಗರ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಜಾಥ ( ಉಷಾ ನರ್ಸಿಂಗ್  ಹೋಮ್, ಸ್ಟೇಡಿಯಂ ಸರ್ಕಲ್ , ನಂಜಪ್ಪ ಹಾಸ್ಪಿಟಲ್, ಮಥೂರ ಪ್ಯಾರಡೈಸ್, ಗೋಪಿ ಸರ್ಕಲ್ , ಶಿವಪ್ಪ ನಾಯಕ ಸರ್ಕಲ್ ಮತ್ತೆ ಹಿಂದಿರುಗಿ ಗೋಪಿ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮಿ ಟಾಕೀಸ್ , ಉಷಾ ನರ್ಸಿಂಗ್ ಹೋಮ್) ತಲುಪಲಿದೆ. 



ಉಷಾ ನರ್ಸಿಂಗ್ ಹೋಮ್ ಸರ್ಕಲ್ ನಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಸಂಕಲ್ಪ ಮಾಡಲಾಯಿತು಼. ಅದರಂತೆ ಹಿಂದೂ ಜಾಗರಣ ವೇದಿಕೆಯಿಂದ ಸಂಜೆ 7 ಗಂಟೆಯ ನಂತರ ರಾಮಣ್ಣ‌ಶ್ರೇಷ್ಠಿ ಪಾರ್ಕ್ ನಿಂದ ಗೋಪಿ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ