ಸುದ್ದಿಲೈವ್/ಶಿವಮೊಗ್ಗ
ಚೋರಡಿಯ ಹಳೇ ಸೇತುವೆ ಮೇಲೆ ಗಾಂಜಾ ಸೇವನೆಗೆ ಮುಂದಾಗಿದ್ದ ಇಬ್ಬರನ್ನ ಬಂಧಿಸಿ 4000 ರೂ. ಮೌಲ್ಯದ 130 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಸುರೇಶ್ ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್ ರವರ ತಂಡ ಇಂದು ಸಂಜೆ ಚೋರಡಿ ಗ್ರಾಮದ ಹಳೆ ಸೇತುವೆ ಮೇಲೆ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ ಇಬ್ಬರನ್ನ ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು 4000 ರೂಪಾಯಿ ಮೌಲ್ಯದ 130 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿರುತ್ತದೆ.... ದಾಳಿಯಲ್ಲಿ ಶಾಂತರಾಜ್ ಪಿಎಸ್ಐ. ತೊಳಚ್ಚನಾಯಕ್ ಪಿಎಸ್ಐ ಸಿಬ್ಬಂದಿಗಳಾದ ಹಾಲಪ್ಪ. ಪ್ರಕಾಶ್. ಶಶಿಧರ್ ನಾಯಕ್. ಮಂಜುನಾಥ್ . ವಿನಾಯಕ್. ಶಶಿ. ಬಸವರಾಜ್ ರಾಘು. ಆದರ್ಶ, ಶಿವಪ್ಪ ರವರು ಪಾಲ್ಗೊಂಡಿರುತ್ತಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ