ಗಾಯಾಳು ಷಡಾಕ್ಷರಿ |
ಸುದ್ದಿಲೈವ್/ಶಿವಮೊಗ್ಗ
ನಾಯಿ ಬೊಗಳಿದ ವಿಚಾರದಲ್ಲಿ ಗಲಾಟೆಯಾಗಿದೆ. ಶಾರು ಯಾನೆ ಲಂಗ್ಡಾ, ಇರ್ಫಾನ್ ಯಾನೆ ಪಾಪ, ಸಬೀನಾ ರೇಷ್ಮಾ ಹಾಗೂ ಹೀನಾರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ನಲ್ಲಿ ದೂರು ದಾಖಲಾಗಿದೆ.
ನ್ಯೂ ಸೀಗೆಬಾಗಿಯಲ್ಲಿ ಮನೆಯ ಮುಂದೆ ನಾಯಿ ಬೊಗಳುವ ವಿಚಾರದಲ್ಲಿ ಶಾರು ಯಾನೆ ಲಂಗ್ಡಾ, ಇರ್ಫಾನ್ ಯಾನೆ ಪಾಪ ಎಂಬುವರು ಇಬ್ಬರು ಷಡಾಕ್ಷರಿಯವರ ಮನೆಗೆ ಬಂದು ನಾಯಿ ಕಟ್ಟುಹಾಕುತ್ತೀರೋ ಅಥವಾ ನಿನ್ನ ಹೆಂಡತಿಯನ್ನ ಬೀದಿಗೆ ಬಿಡುತ್ತೀರೋ ಎಂದು ಗಲಾಟೆ ತೆಗೆದಿದ್ದಾರೆ.
ಅದು ನಮ್ಮ ನಾಯಿ ಅಲ್ಲ ಸರಿಯಾಗಿ ಮಾತನಾಡಿ ಎಂದು ಷಡಾಕ್ಷರಿ ತಿಳಿಸಿದ್ದಾರೆ. ಇಷ್ಟಕ್ಕೆ ಗಲಾಟೆ ಮುಂದು ವರೆದಿದೆ. ಅಲ್ಲೇ ಇದ್ದ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಷಡಾಕ್ಷರಿಯವರ ಪತ್ನಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಬೀನ,
ಹೀನಾ ಮತ್ತು ರೇಷ್ಮ ಎಂಬುವರು ಶಾರೂ ಮತ್ತು ಇರ್ಫಾನ್ ಜೊತೆ ಸೇರಿ ಷಡಾಕ್ಷರಿಯವರ ಪತ್ನಿಯನ್ನ ಎಳೆದಾಡಿ ಅವಮಾನಗೊಳಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಎಳೆದಾಟದಲ್ಲಿ ಪತ್ನಿಯ ಚಿನ್ನದ ಸರವೊಂದು ಕಳೆದು ಹೋಗಿದೆ. ನಂತರ ಪರಿಚಯಸ್ಥರು ಜಗಳ ಬಿಡಿಸಿದ್ದಾರೆ.
ಹೆಂಡತಿಯ ಗೌವಕ್ಕೆ ದಕ್ಕೆ ಬರುವ ಹಾಗೆ ವರ್ತಿಸಿ ಎಳೆದಾಡಿದ ವಿಚಾರದಲ್ಲಿ ಐವರ ವಿರುದ್ಧ ಭದ್ರಾವತಿ ಹಳೆ ನಗರದಲ್ಲಿ ದೂರು ದಾಖಲಾಗಿದೆ. ಗಾಯಾಳು ಷಡಾಕ್ಷರಿ ಮತ್ತು ಅವರ ಪತ್ನಿಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ