ಶುಕ್ರವಾರ, ಆಗಸ್ಟ್ 30, 2024

ಬಿಸಿಎಂ ಹಾಸ್ಟೆಲ್ ನಲ್ಲಿ ಅವ್ಯವಸ್ಥೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದಲ್ಲಿ ಬಿಸಿಎಂ ಹಾಸ್ಟೆಲ್ ನಲ್ಲಿ ಸ್ವಚ್ಛತೆ, ಊಟದ ಬಗ್ಗೆ ದೂರುಗಳು ಬರುತ್ತಿವೆ. ಒಂದು ತಿಂಗಳ ಹಿಂದೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆ್ ನಲ್ಲಿ ರಾತ್ರಿಯ ವೇಳೆಯಲ್ಲೇ ಭರ್ಜರಿ ಪ್ರತಿಭಟನೆ ನಡೆದಿತ್ತು.  ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯ ಬೆನ್ನಲ್ಲೇ ಮತ್ತೋಂದು ಹಾಸ್ಟೆಲ್ ನಲ್ಲಿ ಅವ್ಯವಸ್ಥೆ ತಲೆದೋರಿದೆ.


ಗೋಪಾಳದ ಬಾಲಕಿಯರ ಮೆಟ್ರಿಕ್ ಪೂರ್ವ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳೇ ಸ್ವಚ್ಚತೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹಾಸ್ಟೆಲ್ ನಲ್ಲಿ ಶೌಚಾಲಯಗಳು, ಕಸ ವಿಲೇವಾರಿಗಳ ಕಾರ್ಯಗಳನ್ನ ಮಕ್ಕಳೆ ನಿರ್ವಹಿಸುವಂತೆ ಆಗಿದೆ. 



ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನ ಬದುವಕುವಂತೆ ಮಾಡಿರುವುದಕ್ಕೆ ಯಾರು ಜವಬ್ದಾರರು ಎಂಬ ಪ್ರಶ್ನೆ ಎದ್ದಿದೆ. ಮಾಧ್ಯಮಗಳ ವರೆಗೆ ಸುದ್ದಿ ಬರುತ್ತದೆ ಎಂದರೆ ಅಧಿಕಾರಿಗಳ ವರೆಗೆ ಈ ಸುದ್ದಿ ತಲುಪುತ್ತಿಲ್ಲವೆ ಎಂಬ ಪ್ರಶ್ನೆ ಕಾಡುತ್ತದೆ. 


ಯಾವ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು ಸಿದ್ದ ಉತ್ತರವನ್ನ ಸಿದ್ದಪಡಿಸಿಕೊಂಡಿಸಿದ್ದಾರೆ. ಹಾಸ್ಟೆಲ್ ಗಳಲ್ಲಿ ಇದು ಮಾಮೂಲಿ ಎಂಬ ನಿರ್ಣಯಕ್ಕೆ ಬರುವ ಮೂಲಕ ಸಮಸ್ಯೆಯನ್ನ ನಿರ್ಲಕ್ಷಿಸುವ ಕೆಲಸ ಆಗ್ತಾ ಇದೆ. ವಾರ್ಡನ್ ಗಳ ವಿರುದ್ಧವೂ ಆರೋಪ ಕೇಳಿಬರುತ್ತಿದೆ. ಇದರ ಪರಿಣಾಮವೇ ಈ ಅವ್ಯವಸ್ಥೆಗೆ ಕಾರಣ ಎಂಬುದು ವಿದ್ಯಾರ್ಥಿನಿಯರ ಆರೋಪವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ