ಸುದ್ದಿಲೈವ್/ಶಿವಮೊಗ್ಗ
ಸಣ್ಣಪುಟ್ಟ ದಂಡ ಹಾಕಿ ಕೆಲ ಮಾಧ್ಯಮಗಳಲ್ಲಿ ರಾರಾಜಿಸಿಕೊಳ್ಳು ಟ್ರಾಫಿಕ್ ಪೊಲೀಸರ ಕಾರ್ಯ ವೈಖರಿ ವಿರುದ್ಧ ಶಿವಮೊಗ್ಗ ನಾಗರೀಕರು ಆಕ್ಷೇಪಿಸಿದ್ದಾರೆ.
ಸಂಚಾರಿ ಪೊಲೀಸರು ಜಾಗೃತಿ ಮೂಡಿಸಿ ದಂಡ ವಿಧಿಸಬೇಕಾದ ಜಾಗದಲ್ಲಿ ಕೇವಲ ದಂಡ ವಿಧಿಸುವುದನ್ನೇ ಕಾಯಕ ಮಾಡಿಕೊಂಡಂತೆ ಕಂಡು ಬರುತ್ತಿದೆ. ಪೊಲೀಸರ ಈ ಕಾರ್ಯವೈಖರಿ ವಿರುದ್ಧ ಕೆಲ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೊಟೊ ಮತ್ತು ವಿಷಯವನ್ನ ಉಲ್ಲೇಖಿಸಿ ಆಕ್ಷೇಪಿಸಿರುವ ಸಾರ್ವಜನಿಕರು ಕೇವಲ ದಂಡವನ್ನ ಒಂದೇ ಬಡಾವಣೆ, ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನಡೆಸುತ್ತಿರುವುದು ಎಷ್ಟು ಸರಿ ಎಂದು ಆಕ್ಷೇಪಿಸಲಾಗಿದೆ.
'ಆದಿ ಚುಂಚನಗಿರಿ ಕಲ್ಯಾಣ ಮಂದಿರದ ರಾಣಿ ಚೆನ್ನಮ್ಮ ರಸ್ತೆ ಬಳಿಯ ಚಿತ್ರಣ ಇದಾಗಿದೆ. ಇಲ್ಲಿ ಪ್ರತಿ ನಿತ್ಯವೂ ಸಂಚಾರಿ ಪೊಲೀಸರು ತಪ್ಪದೆ ಕರ್ತವ್ಯ ನಿರ್ವಹಿಸುತ್ತಾರೆ. ಒಳ್ಳೆಯ ಕೆಲಸ.
ಸಾರ್ವಜನಿಕರು ನಿಯಮ ಅನುಕರಣೆಯ ತಪ್ಪಿತಸ್ತರಿಂದ ದಂಡ ವಸೂಲಿಯಾಗಿ ಸರ್ಕಾರಿ ಬೊಕ್ಕಸಕ್ಕೆ ಆದಾಯವು ಆಗುತ್ತದೆ. ಆದರೆ ಇಲ್ಲಿ ಪ್ರತಿ ನಿತ್ಯ ದಿನಕ್ಕೆರಡು ಬಾರಿ ಪೊಲೀಸರು ದಂಡ ವಿಧುಸುತ್ತಾರೆ.' ಆದರೆ ಇದನ್ನೂ ಆಕ್ಷೇಪಿಸದ ಸಾರ್ವಜನಿಕರು ಇಲ್ಲಿ ನಡೆಸಿದಂತೆ ನಗರದ ಇತರೆಡೆಗಳಲ್ಲಿ ಎರಡೂ ಹೊತ್ತು ದಂಡ ವಸೂಲಿ ಮಾಡಲಿ ಎಂಬುದು ಅವರ ಆಕ್ಷೇಪಣೆಯಾಗಿದೆ.
ಆದಿ ಚುಂಚನಗಿರಿ ಕಲ್ಯಾಣ ಮಂದಿರದ ರಾಣಿ ಚೆನ್ನಮ್ಮ ರಸ್ತೆಯಲ್ಲಿ ಎರಡು ಹೊತ್ತು ದಂಡವಸೂಲಿ ಮಾಡಿದಂತೆ ಈ ಕಾರ್ಯವನ್ನ ನಗರದ ಉಳಿದಕಡೆಯೂ ದಂಡ ವಸೂಲಿಯ ಜೊತೆ ಜಾಗೃತಿ ಮೂಡಿಸಲಿ ಎಂಬುದು ಅವರ ಆಕ್ಷೇಪವಾಗಿದೆ. ಬಹಳಷ್ಟು ಸ್ಥಳಗಳಲ್ಲಿ ವಾಹನಗಳನ್ನ ಅಡ್ಡಹಾಕಿ ವಾಹನತಪಾಸಣೆ ಮಾಡುವ ದೃಶ್ಯಗಳು ಕಾಣ ಸಿಗುವುದಿಲ್ಲವೇಕೆ ಎಂದು ಪ್ರಶ್ನಿಸಲಾಗುತ್ತಿದೆ.
ಉದಾಹರಣೆಗೆ RML ನಗರ, ಗೋಪಾಳ, ಬೈಪಾಸ್ ರಸ್ತೆ, ನ್ಯೂಮಂಡ್ಲಿ, ಅಣ್ಣಾ ನಗರದ ಮುಖ್ಯ ರಸ್ತೆ, ಬಸ್ಟ್ಯಾಂಡ್ ನಿಂದ ಗೋಪಾಳ ರಸ್ತೆಯಲ್ಲಿ ಪೊಲೀಸರ ಜಾಗೃತಿ ಮತ್ತು ದಂಡವಸೂಲಿ ಕಾಣದಿರುವ ಬಗ್ಗೆ ಆಕ್ಷೇಪಿಸಲಾಗುತ್ತಿದೆ.
ಆದ್ದರಿಂದ ಸಂಬಂದ ಪಟ್ಟವರು ಗಮನ ಹರಿಸಿ ನಗರದ ಎಲ್ಲಾ ಕಡೆ ಸಂಚಾರಿ ಪೊಲೀಸರು ಚೆನ್ನಮ್ಮ ರಸ್ತೆಯಲ್ಲಿ ನಡೆಯುವ ಕಾರ್ಯಚಾರಣೆ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.
ನಗರದಲ್ಲಿ ವಾಹನ ಸಂಚಾರಕ್ಕೆ ಹಲವೆಡೆ ತೊಂದರೆಗಳಿವೆ. ದಂಡ ವಸೂಲಿಯ ಜೊತೆ ಅದನ್ನೂ ನಿವಾರಿಸಲಿ ಹಾಗೂ ರಾಣಿ ಚೆನ್ನಮ್ಮ ರಸ್ತೆಯಲ್ಲಿ ದಿನಕ್ಕೆ ಎರಡು ಬಾರಿ ದಂಡವಸೂಲಿ ಮಾಡಲು ಧೈರ್ಯ ಬೇರಡೆ ಮಾಡಲಿ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ. ಇನ್ಮೇಲಾದರೂ ಸಂಚಾರಿ ಪೊಲೀಸರು ಜಾಗೃತರಾಗಲಿ.
ಇದನ್ನೂ ಓದಿ-https://www.suddilive.in/2024/08/blog-post_80.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ