ಗುರುವಾರ, ಆಗಸ್ಟ್ 29, 2024

ಹೆಚ್ ಸಿ ಯೋಗೀಶ್ ಅವರಿಂದ ವಿಘ್ನೇಶ್ವರ ಆಟೋ ನಿಲ್ದಾಣ ಉದ್ಘಾಟನೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಳಿಯಿರುವ ಆಟೋ ನಿಲ್ದಾಣವನ್ನ ಮಹಾನಗರ ಪಾಲಿಕೆ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ್ದು, ಈ ಆಟೋ ನಿಲ್ದಾಣವನ್ನ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಇಂದು ಉದ್ಘಾಟಿಸಿದ್ದಾರೆ.


ಶ್ರೀ ವಿಘ್ನೇಶ್ವರ ಆಟೋ ನಿಲ್ದಾಣವೆಂದುಬೀ ಆಟೋ ನಿಲ್ದಾಣಕ್ಕೆ ಹೆಸರಿಡಲಾಗಿದ್ದು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್ ಸಿ ಯೋಗೇಶ್ ರವರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗಳ ಅನುದಾನವನ್ನು ಕೊಡಿಸಿದ್ದರು.‌  



ಈ ಕಾಮಗಾರಿಯು ಈಗ ಪೂರ್ಣಗೊಂಡಿದ್ದು ಆಟೋ ನಿಲ್ದಾಣದ ಉದ್ಘಾಟನೆಯನ್ನು ಹೆಚ್ ಸಿ ಯೋಗೇಶ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಮಹಾಪೌರರಾದ ನಾಗರಾಜ್ ಕಂಕಾರಿ ರವರು, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ಅವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಐಡಿಯಲ್ ಗೋಪಿ ರವರು, ಸರ್ಜಿ ಆಸ್ಪತ್ರೆ ಮಾಲೀಕರಾದ ಶ್ರೀಮತಿ ನಮಿತಾ ಧನಂಜಯ್ ಸರ್ಜಿ ರವರು, ಜಯನಗರ ಪೊಲೀಸ್ ಸ್ಟೇಷನ್ ವೃತ್ತ ನಿರೀಕ್ಷಕರಾದ ಸಿದ್ದನಗೌಡರವರು, ಪ್ರಮುಖರಾದ ಒಡೆಯರ್ ರವರು, ಡಾ. ಜಯಂತ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ. ದಿನೇಶ್ ರವರು ಹಾಗೂ ಆಟೋ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ