ಸುದ್ದಿಲೈವ್/ಶಿವಮೊಗ್ಗ
ನಗರದಲ್ಲಿನ ಬೀದಿ ನಾಯಿಗಳಿಗೆ ಸಂತಾನಹರಣ ಆಪರೇಷನ್ ಆರಂಭವಾಗಿದೆ. ಕಳೆದ ಒಂದು ತಿಂಗಳಿಂದ 35 ವಾರ್ಡ್ ಗಳಲ್ಲಿ ಬೀದಿ ನಾಯಿಗಳನ್ನ ಹಿಡಿದು ಸಂತಾನ ಹರಣ ಮಾಡಲಾಗುತ್ತಿದೆ. ಇದು ಇನ್ನೂ 15 ದಿನ ಮುಂದು ವರೆಯಲಿದೆ.
ಬೀದಿನಾಯಿಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಪಾಲಿಕೆಯು ಆಪರೇಷನ್ ಆರಂಭಿಸಿದೆ. ನಾಯಿಗಳನ್ನ ಸಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶವಿದೆ. ಇದೊಂದೇ ಮಾರ್ಗವನ್ನ ಪಾಲಿಕೆ ಅನುಸರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಸಂತಾನ ಹರಣ ಚಿಕಿತ್ಸೆಗೆ ಪಾಲಿಕೆ ಮುಂದಾಗಿವೆ.
ಸಂತಾನ ಹರಣಕ್ಕೆ ನಾಯಿಯ ಸಂಖ್ಯೆ ಎಷ್ಟಿದೆ ಎಂಬುದನ್ನ ಲೆಕ್ಕಾಚಾರ ಹಾಕಿ ಕಾರ್ಯಾಚರಣೆ ನಡೆಸಲಾಗುತ್ತದೆ.ನಗರದ ಜನಸಂಖ್ಯೆಗೂ ಬೀದಿ ನಾಯಿಗಳ ಸಂಖ್ಯೆಗೂ ಅನುಗುಣವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಇಡೀ ದೇಶದ ಸಂಖ್ಯೆಯು 2011 ರಲ್ಲಿ ಜನಸಂಖ್ಯೆ ಲೆಕ್ಕಾಚಾರ ಮಾಡಲಾಗಿದೆ. ನಿಯಮದ ಪ್ರಕಾರ ಪ್ರತಿ 10 ವರ್ಷಕ್ಕೆ ಜನಸಂಖ್ಯೆ ಲೆಕ್ಕಾಚಾರ ಹಾಕಬೇಕು. ಆದರೆ 2011 ರಲ್ಲಿ ಜನ ಸಂಖ್ಯೆ ಎಣಿಸಲಾಗಿದ್ದು ಇದುವರೆಗೂ ಲೆಕ್ಕಾಚಾರ ಹಾಕಿಲ್ಲ.
ಜನಸಂಖ್ಯೆಗೆ ಅನುಗುಣವಾಗಿ ಶೇ.2 ರಷ್ಟು ನಾಯಿಗಳ ಸಂಖ್ಯೆ ಇರಲಿದೆ ಎಂಬ ಲೆಕ್ಕ ಹಾಕಲಾಗುತ್ತದೆ. 2011 ರಲ್ಲಿ ಶಿವಮೊಗ್ಗ ನಗರದ ಜನ ಸಂಖ್ಯೆಯ ಲೆಕ್ಕಾಚಾರದ ಪ್ರಕಾರ 4-6 ಸಾವಿರ ನಾಯಿಗಳಿವೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಈಗ 13 ವರ್ಷ ಕಳೆದಿದ್ದು ಜನಸಂಖ್ಯೆಯ ಲೆಕ್ಕಾಚಾರವೇ ಇಲ್ಲವಾದುದ್ದರಿಂದ ನಾಯಿಗಳ ಸಂಖ್ಯೆಯೂ ಅಂದಾಜಿಸಲಾಗಿದೆ. ಅದರ ಪ್ರಕಾರ ಈಗ 10 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರಬಹುದು ಎಂಬ ಅಂದಾಜಿನ ಲೆಕ್ಕಾಚಾರ ಹಾಕಲಾಗಿದೆ.
ಇದರಿಂದ ಬೀದಿ ನಾಯಿಗಳ ಪಕ್ಕಾ ಲೆಕ್ಕಾಚಾರ ಸಿಕ್ತಾ ಇಲ್ಲ. ಅಲ್ಲದೆ ಈ ನಾಯಿಗಳ ಸಂತಾನ ಹರಣದಲ್ಲಿ ಈಗಿನ ಅಂದಾಜು ಪ್ರಕಾರ 1 ಪರ್ಸೆಂಟ್ ನಾಯಿಗಳ ಸಂತಾನ ಹರಣವಾಗಿದೆ. ಈ ಬೀದಿ ನಾಯಿಗಳ ಸಂತಾನ ಹರಣ ಕಾರ್ಯಾಚರಣೆ ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವರ್ಷಕ್ಕೊಮ್ಮೆ ನಡೆಯುವಷ್ಟರಲ್ಲಿ ಉಳಿದ ಸಂತಾನ ಹರಣಕ್ಕೆ ಒಳಗಾಗದ 99% ನಾಯಿಗಳು ಮತ್ತೆ ಮರಿ ಹಾಕುವುದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಕಾರಣದಿಂದ ಪಾಲಿಕೆಗಳು ತಮ್ಮ ನಿಯಮಗಳನ್ನ ಬದಲಾಯಿಸಿಕೊಳ್ಳದಿದ್ದರೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲಿದೆ. ಅದೂ ಅಲ್ಲದೆ ನಗರದ ಸುತ್ತಮುತ್ತಲಿನ ಗ್ರಾಮಪಂಚಾಯಿತಿಗೆ ಬೀದಿ ನಾಯಿಗಳಿಗೆ ಸಂತಾನ ಹರಣ ನಡೆಸಲು ಪಾಲಿಕೆಗೆ ಸಿಕ್ಕಂತೆ ಅನುದಾನ ಸಿಗಲ್ಲ. ಹೀಗಾಗಿ ಈ ಗ್ರಾಪಂಗಳು ನಾಯಿಗಳನ್ನ ಹಿಡಿದು ಪಾಲಿಕೆಯ ಗಡಿಗಳಿಗೆ ಬಿಟ್ಟು ಹೋಗುವುದರಿಂದ ನಗರದಲ್ಲಿನ ನಾಯಿಗಳ ಸಂಖ್ಯೆ ಮತ್ತೆ ದುಪ್ಪಟ್ಟಾಗುತ್ತಿವೆ.
ಇದರಿಂದ ಪ್ರತಿ ಮೂರು ತಿಂಗಳಿಗೆ ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮ ಹಮ್ಮಿಕೊಳ್ಳದಿದ್ದರೆ ಬೀದಿ ನಾಯಿಗಳ ಹಾವಳಿ ಉಲ್ಬಣವಾಗುವುದರಲ್ಲಿ ಎರಡು ಮಾತಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ