ಸಚಿವ ಕೃಷ್ಣೇಭೈರೇಗೌಡ |
ಸುದ್ದಿಲೈವ್/ಶಿವಮೊಗ್ಗ
ನಾಳೆ ಕಂದಾಯ ಸಚಿವ ಕೃಷ್ಣಬೈರೇಗೌಡ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 3 ಗಂಟೆಗಳ ಕಾಲ ಶಿವಮೊಗ್ಗದಲ್ಲಿ ಇರುವುದರಿಂದ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
ಸಚಿವ ಕೃಷ್ಣಭೈರೇಗೌಡ ನಾಳೆ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಮೂಲಕ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸುತ್ತಿದ್ದು ನಂತರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಮೊದಲು ಬಿಆರ್ ಪಿಯ ಭದ್ರ ಜಲಾಶಯಕ್ಕೆ ಭೇಟಿ ನೀಡಲಿರುವ ಸಚಿವರು ನಂತರ ಭದ್ರಾವತಿ ನಗರಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.
ಸಂಜೆ 6 ಗಂಟೆಯ ಮೂಲಕ ಬೆಂಗಳೂರಿಗೆ ರಸ್ತೆಯ ಮೂಲಕ ವಾಪಾಸ್ ಆಗಲಿದ್ದಾರೆ. ಮಂತ್ರಿಯಾಗಿ ಎರಡನೇ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಕೃಷ್ಣಭೈರೇಗೌಡರ ಭೇಟಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ-https://www.suddilive.in/2024/08/blog-post_28.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ