ಮಂಗಳವಾರ, ಆಗಸ್ಟ್ 6, 2024

ಶರತ್ ಕಲ್ಯಾಣಿ ಅರೆಸ್ಟ್



 ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆಯಿಂದಲೇ ಲಕ್ಷ ಲಕ್ಷ ಹಣ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಬಿಜೆಪಿ ಮಾಧ್ಯಮ ಪ್ರಮುಖನೋರ್ವನನ್ನು ಶಿವಮೊಗ್ಗ ಮಹಿಳ ಪೊಲೀಸರು ಬಂಧಿಸಿದ್ದಾರೆ. 


ಜು.26 ರಂದು 43 ವರ್ಷದ ಮಹಿಳೆ ಶರತ್ ಕಲ್ಯಾಣಿಯ ವಿರುದ್ಧ  ವಂಚನೆ ಪ್ರಕರಣವನ್ನ ದಾಖಲಿಸಿದ್ದರು. ಮಹಿಳಾ ಪೊಲೀಸ್ ಇನ್ ಸ್ಪೆಕ್ಟರ್ ನ ತಂಡ ಕಾರ್ಯಾಚರಣೆ ನಡೆಸಿ ಬಿಜಾಪುರ ಜಿಲ್ಲೆಯಲ್ಲಿ ಶರತ್ ನನ್ನ‌ ಬಂಧಿಸಿದೆ ಎಂದು ಮಾಧ್ಯಮವೊಂದು ಪ್ರಕಟಿಸಿದೆ. 


ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ನನ್ನಿಂದಲೇ ಹಣ ಪಡೆದ ಶರತ್ ಕಲ್ಯಾಣಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ.  ಪೊಲೀಸರು ಕಲಂ 376(2) ಎನ್, 420,354,323, 506 ಐಪಿಸಿ ಸೆಕ್ಷನ್ ಅಡಿ ದೂರು ದಾಖಲಾಗಿತ್ತು. 


ಶರತ್ ಕಲ್ಯಾಣಿ ವಜಾ


ಬಿಜೆಪಿಯ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕನಾಗಿದ್ದ ಶರತ್ ಕಲ್ಯಾಣಿಯನ್ನ ವಜಾಗೊಳಿಸಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ವಜಾಗೊಳಿಸಿರುವುದಾಗಿ ತಿಳಿದು ಬಂದಿದೆ

ಇದನ್ನೂ ಓದಿ-https://www.suddilive.in/2024/08/blog-post_35.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ