ಸೋಮವಾರ, ಆಗಸ್ಟ್ 19, 2024

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನ ದಿಕ್ಕಾರದ ಘೋಷಣೆ

 


 

 ಸುದ್ದಿಲೈವ್/ಶಿವಮೊಗ್ಗ


ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ರಾಜ್ಯಪಾಲರು ಅನುಮತಿ ನೀಡಿರುವುದನ್ನ ಖಂಡಿಸಿ ಇಂದು ಸಹ ಕಾಂಗ್ರೆಸ್ ಶಿವಮೊಗ್ಗದಲ್ಲಿ ಪ್ರತಿಭಟನೆ ಮುಂದುವರೆದಿದೆ.


ಮೊನ್ನೆ ಶನಿವಾರ ಬೆಳಿಗ್ಗೆ ರಾಜ್ಯಾಪಾಲ ಗೆಹ್ಲಾಟ್ ಅವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರು. ಸಂಜೆಯಿಂದಲೇ ಈ ಪ್ರಕರಣ ರಾಜಕಾರಣ ಪಡೆದುಕೊಂಡು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. 



ಶಿವಮೊಗ್ಗದಲ್ಲಿ ಈ ಬೆಳವಣಿಗೆ ನಡೆದರೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ವೈ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಿದೆ. ಇಂದು ಸಹ ಪ್ರತಿಭಟನೆ ಮುಂದುವರೆದಿದ್ದು, ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. 


ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುವ ಮುನ್ನ ಗೋಪಿ ವೃತ್ತದ ಬಳಿ ಟಯರ್ ಸುಡಲಾಗಿದೆ. ರಾಹ್ಯಪಾಲರೆ ನೀವು ಕೇಂದ್ರದ ಕೈಗೊಂಬೆ ನಿಮಗೆ ದಿಕ್ಕಾರ, ಸಂವಿಧಾನ ವಿರೋದಿ ರಾಜ್ಯ ಪಾಲರ ವಿರುದ್ಧ ದಿಕ್ಕಾರ ಎಂಬ ಹಲವು ರಾಜ್ಯಪಾಲರ ವಿರುದ್ಧ ಪ್ಲಕಾರ್ಡ್ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆದಿದೆ. ರಾಜ್ಯಪಾಲರನ್ನ ವಜಾಗೊಳಿಸಬೇಕು ಹಾಗೂ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ವಾಪಾಸ್ ಪಡೆಯುವಂತೆ ಆಗ್ರಹಿಸಲಾಗಿದೆ. 


ಮೋಹನ್ ಮಾತನಾಡಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಸಾಬೀತಾದರೆ ಮೊದಲು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ. ಯಡಿಯೂರಪ್ಪನವರ ಮಕ್ಕಳ ಭ್ರಷ್ಠಾಚಾರ ಎಷ್ಟಿದೆ ಗೊತ್ತಾ? ಅದನ್ನ ಮೊದಲು ವಿಚಾರಣೆಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು. 


ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಯಡಿಯೂರಪ್ಪನವರ ಮಕ್ಕಳ ಹಗರಣವಿಲ್ಲವಾ? ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ನೀಡಿರುವುದು ರಾಜಕೀಯ ದುರದ್ದೇಶ ಅಡಗಿದೆ ಎಂದು ಗುಡುಗಿದರು.  


ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿಕಾರಿಪುರದ ನಾಗರಾಜ್ ಗೌಡ, ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಹೆಚ್ ಸಿ, ಯೋಗೀಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮೊದಲಾದ ನಾಯಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ