ಸೋಮವಾರ, ಆಗಸ್ಟ್ 19, 2024

ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪರಿಂದ ಸಿಟಿ ರೌಂಡ್ಸ್



ಸುದ್ದಿಲೈವ್/ಶಿವಮೊಗ್ಗ 


ಶಿವಮೊಗ್ಗದಲ್ಲಿ ದಿಡೀರ್ ಎಂದು ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳು ಉದ್ಭವಿಸಿದೆ. ಕೆಲ ಮನೆಗಳಿಗೆ ಕುಡಿಯುವ ನೀರು ಹೆಚ್ಚಿನ ಫೋರ್ಸ್ ಆಗಿ ಬರುತ್ತಿಲ್ಲವೆಂದು ದೂರಿದರೆ, ಕೆಲ ಬಡಾವಣೆಗಳಲ್ಲಿ ಇನ್ನೂ ಕುಡಿಯುವ ನೀರು ಮನೆಗಳಿಗೆ ಬರ್ತಾಯಿಲ್ಲ. 


ಈ ಬಗ್ಗೆ ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪ ನಗರ ರೌಂಡ್ಸ್ ಮಾಡಿದ್ದಾರೆ.   ನಗರದ ಬಿ.ಬಿ ರಸ್ತೆ ಹಾಗೂ ಕುಂಬಾರಕೇರಿಯ ಬಡಾವಣೆಗಳಿಗೆ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯರ ಸಮಸ್ಯೆಗಳನ್ನುಆಲಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.


ಬಿಬಿ ರಸ್ತೆಯಲ್ಲಿ ಒಂದು ಕಡೆ 9 ಮನೆಗಳಿಗೆ ಮತ್ತು ಒಂದು ಲೈನ್ ಮನೆಗಳಿಗೆ  ಈ ಹಿಂದೆ ಕುಡಿಯುವ ನೀರನ್ನ ಮೈನ್ ವಾಲ್ ಗಳಿಂದ ನೀಡುತ್ತಿದ್ದರಿಂದ ಹೆಚ್ಚಿನ‌ಫೋರ್ಸ್ ನಲ್ಲಿ ನೀರು ಮನೆಗಳಿಗೆ ತಲುಪುತ್ತಿತ್ತು. ಆದರೆ ಈಗ ಈ ಮನೆಗಳಿಗೆ 24×7 ರ ಅಡಿಯಲ್ಲಿ ಟ್ಯಾಂಕ್ ಮೂಲಕ ನೀರು ಬರುತ್ತಿರುವುದರಿಂದ  ಹೆಚ್ಚಿನ ಫೋರ್ಸ್ ನಲ್ಲಿ ಬರುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. 


ಈ ಬಗ್ಗೆ ಗಮನ ಹರಿಸಿ ಆ.22 ರ ಒಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ