ಶನಿವಾರ, ಆಗಸ್ಟ್ 24, 2024

ಟೂಲ್ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಸ್ಥಳೀಯರು




ಸುದ್ದಿಲೈವ್/ಶಿಕಾರಿಪುರ


ತಡಸ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ  ಶಿರಾಳಕೊಪ್ಪ  ಶಿಕಾರಿಪುರ ಮಧ್ಯ ನಿರ್ಮಾಗೊಂಡ ಟೋಲ್ ನಿಂದಾಗಿ ಸ್ಥಳೀಯ ರೈತರಿಗೆ, ಕೂಲಿ ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು  ಟೋಲ್ ರದ್ದುಗೊಳಿಸುವಂತೆ ರೈತರ ಹೋರಾಟ ಸಮಿತಿಯೊಂದು ಪ್ರತಿಭಟನೆ ನಡೆಸಲು ಸಜ್ಜಾಗಿದೆ.‌


ಪಟ್ಟಣದ ಶ್ರೀ ವೀರಭದ್ರೇಶ್ವರ ಸಭಾಂಗಣದ್ದಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ವಿರುದ್ದದ ಹೋರಾಟಕ್ಕೆ ಸಮಿತಿಯೂ ರಚನೆ ಮಾಡಲಾಗಿದೆ. ತಾಲ್ಲೂಕಿನ ಯುವ ನ್ಯಾಯವಾದಿ ಶಿವರಾಜ್ ಅಧ್ಯಕ್ಷರಾಗಿ, ನ್ಯಾಯವಾದಿ ವಿನಯ್ ಪಾಟೀಲ್ ಸಂಚಾಲಕರಾಗಿ ಹಾಗೂ ಶಿರಾಳಕೊಪ್ಪ ರೈತ ಸಂಘದ ಅಧ್ಯಕ್ಷ ನವೀದ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದು ಸುಮಾರು 5 ಜನ ರನ್ನು ಉಪಾಧ್ಯಕ್ಷರಾಗಿ 6 ಜನ ಸಹ ಕಾರ್ಯದರ್ಶಿಗಳಾಗಿ ಹಾಗೂ ಸುಮಾರು 10ಜನರನ್ನು ಸಲಹೆಗರರನ್ನಾಗಿ ಆಯ್ಕೆ ಮಾಡಲಾಗಿದೆ.


ಈ ಸಂಧರ್ಭದಲ್ಲಿ ಸಮಿತಿಯ ನೂತನ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಮಾತನಾಡಿ ಸದರಿ ಟೋಲ್ ಗೇಟ್ ನಿಂದಾಗಿ ಸ್ಥಳೀಯರಿಗೆ, ಅಕ್ಕ ಪಕ್ಕದ ರೈತ ಭಾಂದವರಿಗೆ, ರೋಗಿಗಳಿಗೆ ದಿನ ನಿತ್ಯ ಆರ್ಥಿಕ ವಾಗಿ ತೊಂದರೆ ಆಗುತ್ತಿದೆ. ಸ್ಥಳೀಯರು ತಾಲ್ಲೂಕು ಕೇಂದ್ರಕ್ಕೆ ಓಡಾಡಲು ಕಷ್ಟ ಪಡುವಂತಹದ್ದು ಪರಿಸ್ಥಿತಿ ನಿರ್ಮಾಣವಾಗಿದ್ದು ಅನೈತಿಕ ವಾಗಿ, ಅವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟ ಈ ಟೋಲ್ ಗೇಟನ್ನು ಕಿತ್ತೊಗಿಯಲೇ ಬೇಕಾಗಿದೆ. ಸ್ಥಳೀಯ ಜನ ಸಾಮಾನ್ಯರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಈ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.


ಪಟ್ಟಣದ ಹಿರಿಯ ವೈದ್ಯ ಡಾll ಮುರುಘರಾಜ್, ರೈತ ಸಂಘದ ಹಿರಿಯರಾದ ಜಯಪ್ಪ ಗೌಡರು, ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ್ರು,    ಕಾರ್ಯಧ್ಯಕ್ಷ ಪುಟ್ಟನ ಗೌಡ್ರು ಆಮ್ ಆದ್ಮಿ ಪಕ್ಷದ ಚಂದ್ರಶೇಖರ ರೇವಣಕಾರ,ಕೆ ಪಿ ಸಿ ಸಿ ಸದಸ್ಯ ಎನ್ ಚಂದ್ರಪ್ಪ ಹಿರೇಜಂಬೂರು, ಬಿಜೆಪಿ ಮುಖಂಡ ರಟ್ಟೀಹಳ್ಳಿ ಲೋಕಪ್ಪ ಸತೀಶ್ ತಾಳಗುಂದ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥೆಳೀಯರು, ರೈತರು ಇದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ