ಸುದ್ದಿಲೈವ್/ರಿಪ್ಪನ್ ಪೇಟೆ
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಸ್ಟೆಲ್ ವಿಸಿಟ್ ಮಾಡಿ ಸಂಚಲನ ಮೂಡಿಸಿದ್ದಾರೆ. ಭೇಟಿ ವೇಳೆ ಹಾಸ್ಟೆಲ್ ವಾರ್ಡನ್ ನ್ನ ಅಮಾನತು ಪಡಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ರಿಪ್ಪನ್ ಪೇಟೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ದಿಡೀರ್ ಭೇಟಿ ನೀಡಿದ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ನೇರವಾಗಿ ಅಡುಗೆ ಮನೆಗೆ ಭೇಟಿ ನೀಡಿ ಅಡುಗೆ ತಪಾಸಣೆ ನಡೆಸಿದ್ದಾರೆ. ಅವ್ಯವಸ್ಥೆ ಕಂಡು ವಾರ್ಡನ್ ಸಸ್ಪೆಂಡ್ ಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ನಲ್ಲಿ ವಾರ್ಡನ್ ಮತ್ತು ಅಡುಗೆಯವರು ಚಿತ್ರ ತೋರಿಸಿ ಮುದ್ದೆ ಊಟ ಹೀಗಿರುತ್ತೆ ಎಂದು ಹೇಳಿದ್ದಕ್ಕೆ ಮತ್ತು ಶೌಚಾಲಯವನ್ನ ವಿದ್ಯಾರ್ಥಿನಿಯರ ಕೈಯಲ್ಲೇ ತೊಳೆಸಿರುವುದಾಗಿ ಮಕ್ಕಳು ಹೇಳಿದ ಪರಿಣಾಮ ಶಾಸಕರು ಸ್ಥಳದಲ್ಲಿಯೇ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಅಡಿಗೆಯವರಿಗೆ ನೋಟೀಸ್ ನೀಡಲು ಸೂಚಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ