ಸುದ್ದಿಲೈವ್/ಶಿವಮೊಗ್ಗ
ದುರ್ಗಿ ಪ್ರಖಂಡ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಾಳೆ ಸಂಜೆ 5 ಗಂಟೆಗೆ ಬೃಹತ್ ಮೋಟರ್ ಜಾಥವನ್ನ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಜಾಥವು ರವೀಂದ್ರ ನಗರ ಗಣಪತಿ ದೇವಸ್ಥಾನದಿಂದ ಆರಂಭಗೊಂಡು ( ಉಷಾ ನರ್ಸಿಂಗ್ ಹೋಮ್, ಸ್ಟೇಡಿಯಂ ಸರ್ಕಲ್ , ನಂಜಪ್ಪ ಹಾಸ್ಪಿಟಲ್, ಮಥೂರ ಪ್ಯಾರಡೈಸ್, ಗೋಪಿ ಸರ್ಕಲ್ , ಶಿವಪ್ಪ ನಾಯಕ ಸರ್ಕಲ್ ಮತ್ತೆ ಹಿಂದಿರುಗಿ ಗೋಪಿ ಸರ್ಕಲ್, ಜೈಲ್ ಸರ್ಕಲ್, ಲಕ್ಷ್ಮಿ ಟಾಕೀಸ್ , ಉಷಾ ನರ್ಸಿಂಗ್ ಹೋಮ್) ತಲುಪಲಿದೆ.
ಉಷಾ ನರ್ಸಿಂಗ್ ಹೋಮ್ ಸರ್ಕಲ್ ನಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಸಂಕಲ್ಪ ಮಾಡಲಾಗುವುದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕಾಗಿ ರಾಜೇಶ್ ಗೌಡ ಬಜರಂಗದಳ ಶಿವಮೊಗ್ಗ ವಿಭಾಗ ಸಂಯೋಜಕರು ಕೇಳಿಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ