ಬುಧವಾರ, ಆಗಸ್ಟ್ 28, 2024

ಸಾಗುವಾನಿ ಮರ ಕಳ್ಳ ಸಾಗಾಣಿಕೆ-ನಾಲ್ವರು ಬಂಧನ



ಸುದ್ದಿಲೈವ್/ಭದ್ರಾವತಿ


ನಾಟವನ್ನ ಉಂಬ್ಳೆಬೈಲು ವಲಯದ ಸಾಲಗೆರೆಯಿಂದ ಗಾಜನೂರಿಗೆ ಕಳ್ಳ ಸಾಗಣಿಕೆ ಮಾಡುವ ವೇಳೆ ಭದ್ರಾವತಿ ಅರಣ್ಯ ಇಲಾಖೆ ದಾಳಿ ನಡೆಸಿ ನಾಲ್ವರನ್ನ ಬಂಧಿಸಿದ್ದಾರೆ. ಒಂದು ಟಾಟಾ ಏಸ್, ದ್ವಿಚಕ್ರವಾಹನ ಹಾಗೂ ನಾಲ್ವರನ್ನ ಬಂಧಿಸಲಾಗಿದೆ. 


ಟಾಟಾ ಏಸ್ ನಲ್ಲಿ 6 ಸಾಗುವಾನಿ ಮರಗಳನ್ನ ಸಾಲುಗೆರೆಯಿಂದ ಗಾಜನೂರಿಗೆ ಸಾಗಿಸುವಾಗ  ಅರಣ್ಯ ಅಧಿಕಾರಿಗಳು ಖಡಕ್ ಕಾರ್ಯಾಚಾರಣೆ ನಡೆಸಿದ್ದರೆ. ಸಾಲುಗೆರೆಯ ಮಧುಸೂಧನ್, ಉಂಬ್ಳೆಬೈಲಿನ ಕುಮಾರ್, ಕೃಷ್ಣ, ಮೈಲಾರಿ ಎಂಬುವರನ್ನ ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ. 


ಉಂಬ್ಳೆಬೈಲು ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ಗಿಡ್ಡಸ್ವಾಮಿ, ಡೆಪ್ಯೂಟಿ ಆರ್ ಎಫ್ ಒ ಪವನ್ ಮಹೇಂದ್ರಕರ್, ನಾಗರಾಜ್, ಬೀಟ್ ಆಫೀಸರ್ ಶ್ರೀಕಾಂತ್, ಶಂಕರವಲಯ ಮತ್ತು ಉಂಬ್ಳೆಬೈಲಿನ ವಲಯ ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ