ಮಂಗಳವಾರ, ಆಗಸ್ಟ್ 20, 2024

ಸಿದ್ದರಾಮಯ್ಯ ಆರೋಪ ಮುಕ್ತರಾಗಿ ಬರಲಿ ನಾವು ಕಾಲು ತೊಳೆಯುತ್ತೇವೆ-ಬಿಜೆಪಿ ಶಾಸಕ ಚೆನ್ನಬಸಪ್ಪ

 


ಸುದ್ದಿಲೈವ್/ಶಿವಮೊಗ್ಗ

 

ಪ್ರಜಾಪ್ರಭುತ್ವದ ಬುಡವನ್ನೇ ಕಾಂಗ್ರೆಸ್ ಅಲುಗಾಡಿಸಲು ಹೊರಟಿದ್ದಾರೆ. ಸಂಯಮವಾಗಿ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಬೇಕಿದ್ದ ಕಾಂಗ್ರೆಸ್ ದಾಷ್ಟ್ಯರ ರೀತಿ ಮುನ್ನುಗ್ಗುತ್ತಿದೆ ಎಂದು ಶಾಸಕ ಚೆನ್ನ ಬಸಪ್ಪ ಆತಂಕ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿ ನಡೆಸಿದ ಅವರು ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರಶ್ನಿಸ ಬೇಕಿದ್ದ ಕಾಂಗ್ರೆಸ್ ತಾನು ಹೇಳಿದ್ದೇ ಅಂಬೇಡ್ಕರ್ ಕಾನೂನು ಎಂಬಂತೆ ಬಿಂಬಿಸುತ್ತಿದೆ. ರಾಜ್ಯಪಾಲರನ್ನ ಅವಮಾನಿಸಲಾಗಿದೆ. ಐವಾನ್ ಡಿಸೋಜರ ವಾಗ್ದಾಳಿ ಅಚ್ಚರಿ ಮೂಡಿಸಿದೆ. 


ಅವರು ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಕರೆದ ಶಾಸಕರು ಬಾಂಗ್ಲಾ ರೀತಿಯಲ್ಲಿ ರಾಜ್ಯಪಾಲರ ಮೇಲೆ ದಾಳಿ ನಡೆಸಲಾಗುವುದು ಎಂಬ ಅವರ ಹೇಳಿಕೆ ಆತಂಕ ಮೂಡಿಸುತ್ತದೆ.  ರಾಜ್ಯದಲ್ಲಿ ಕಾನೂನು ಅಸ್ಥಿತ್ವದಲ್ಲಿ ಇದೆಯೋ ಇಲ್ಲೆವೋ. ಕಾನೂನು ಸುವ್ಯವಸ್ಥೆ ಇದ್ದರೆ ಮೊದಲು ಬಂಧಿಸಿ ಎಂದು ಆಗ್ರಹಿಸಿದರು. 


ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಖಾಸಗಿ ಬಸ್ ಜಖಂಗೊಳಿಸಲಾಗಿದೆ.  ಹಾಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ಹೋರಾಟ ಪ್ರಜಾಪ್ರಭುತ್ವದಲ್ಲಿ ಸಿಕ್ಕ ಹಕ್ಕು. ಆದರೆ ಅದನ್ನ ಹೇಗಾಯಿತೋ ಹಾಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು. ಯಾರು ಯಾರ  ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದಾಗ ಅವರೆಲ್ಲ ಹೇಗೆ ನಡೆದುಕೊಂಡರು ಎಂಬುದನ್ನ‌ ವಿವರಿಸಿದರು. 


ಸಿದ್ದರಾಮಯ್ಯ ಎಲ್ಲಿ ಉತ್ತರ ಕೊಡಬೇಕಿತ್ತೋ ಅಲ್ಲಿ ಕೊಡಲಿಲ್ಲ. ಸದನದಿಂದ ಓಡಿ ಹೋದರು. ಹಾಗಾಗಿ ನಮಗೆ ಈ ಪ್ರಕರಣದಲ್ಲಿ ಅನುಮಾನ ಹುಟ್ಟಿದೆ. ಯಾರು ನಿಮಗೆ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಗೊತ್ತಿಲ್ಲ. ರಾಜ್ಯ ಪಾಲರ ನಡೆ ಸ್ವಾಗತಾರ್ಹ ನಡೆ. ಅವರು ಏಕಾಏಕಿ ಪ್ರಾಸಿಕ್ಯೂಷನ್ ನೀಡಿಲ್ಲ. ರಾಜ್ಯಪಾಲರು ಸರ್ಕಾರದ ಭಾಗವಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವಾಗ‌ ಒಳ್ಳೆಯವರಾಗಿದ್ದ  ರಾಜ್ಯಪಾಲರು ಮಾಡಬಾರದ ಕೆಲಸ ಮಾಡುವಾಗ ಪ್ರಾಸಿಕ್ಯೂಷನ್ ಗೆ ನೀಡಿದಾಗ ಕೆಟ್ಟವರಾಗುತ್ತಾರಾ? ಎಂದು ಕೇಳಿದರು.


ಸಿದ್ದರಾಮಯ್ಯ ನಿರಪರಾಧಿ ಎಂದ ಮೇಲೆ ಭಯವೇಕೆ. ಅವರು ಆರೋಪ ಮುಕ್ತರಾಗಿ ಬರಲಿ ನಾವು ಪಾದ ತೊಳೆಯುತ್ತೇವೆ. ಹೊಸ ಶಾಸಕರಿಗೆ ಮೂರು ಮೂರು ದಿನ ಪಾಠ ಮಾಡಿದ ಕೃಷ್ಣೇಭೈರೇಗೌಡರು ರಾಜ್ಯಪಾಲರ ವಿರುದ್ಧ ಅವಾಚ್ಯ‌ಶಬ್ದ ಬಳಕೆ ಮಾಡುತ್ತಾರೆ. ಇದು ಯಾವ ರೀತಿಯ ನಡತೆ ಎಂದು ದೂರಿದರು. 


ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನ ಬಿಜೆಪಿ ಮಾಡಿಲ್ಲ. 136 ಜನ ಕಾಂಗ್ರೆಸ್ ಶಾಸಕ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಇಲ್ಲವೆಂದರೆ ಅವರ ಜಾಗಕ್ಕೆ ಬೇರೆ ಅವರು ಬಂದು ಆಡಳಿತ ನಡೆಸುತ್ತಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾನಯ್ಯ 1093 ಸಮುದಾಯ ಭವನ, ಹಾಸ್ಟೆಲ್ ಗಳಿಗೆ ಬಿಜೆಪಿ ಬಿಡುಗಡೆ ಮಾಡಿದ ಅನುದಾನಗಳನ್ನ  ತಡೆ ಹಿಡಿದಿದ್ದಾರೆ. 


ತಡೆಹಿಡಿದ ಆದೇಶವನ್ನ ಸಂಪೂರ್ಣ ರದ್ದು ಮಾಡಿ 300 ಕೋಟಿ ಹಣ ವಾಪಾಸ್ ಪಡೆದಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನ ಗುರುತಿಸಿ 10 ಲಕ್ಷ ರೂ.ಗಳಿಂದ ಕೋಟಿಗಟ್ಟಲೆ ಹಣ ಅನುದಾನ ನೀಡಲಾಗಿತ್ತು. ಅದನ್ನ ಸಂಪೂರ್ಣ ರದ್ದು ಮಾಡಿದ್ದೀರಿ. ಶಿವಮೊಗ್ಗದ ವಿದ್ಯಾರ್ಥಿ ನಿಲಯಗಳು ಸೇರಿ 99  ಸಮುದಾಯ ಭವನಗಳಿಗೆ ನೀಡಿದ ಹಣ ರದ್ದಾಗಿದೆ. 


ಇದು ಅನಾಗರೀಕ ವರ್ತನೆ. ಸಮುದಾಯಗಳಿಗೆ ಶಕ್ತಿ ನೀಡುವ ಜಾಗದಲ್ಲಿ ತಡೆಹಿಡಿದು ನಂತರ ರದ್ದು ಮಾಡಿದ್ದೇಕೆ? ಆ ಸಮಾಜವನ್ನ ಕಟ್ಟಿಕೊಂಡು ಬಿಹೆಪಿ ಹೋರಾಟ ಮಾಡಲಿದೆ. ಸರ್ಕಾರ ಪಾಪರ್ ಎದ್ದು ಹೋಗಿದೆ. ಗ್ಯಾರೆಂಟಿ ಗಾಗಿ ಹಣವನನ್ನ ಹೊಂದಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಿ ಎಂದು ತಿಳಿದಿದ್ದಿವಿ ಅದನ್ನೂ ಗಾಳಿಗೆ ತೂರಿದ್ದೀರಿ ಎಂದು ಗುಡುಗಿದರು. 


ದೇವರಾಜ್ ಅರಸ್ ಅಭಿವೃದ್ಧಿ ಒಕ್ಕಲಿಗ ಅಭಿವೃದ್ಧಿ ನಿಗಮ ವೀರಶೈವ ಅಭಿವೃದ್ಧಿ ನಿಗಮ, ಸೇರಿದ ಹಲವು ನಿಗಮಗಳಿಗೆ ಹಣ ನೀಡೇ ಇಲ್ಲ.  ಹೋಗಲಿ ರದ್ದು ಮಾಡುದ್ರಿ ಯಾವುದಾದರೂ ಹೊಸ ನಿಗಮಗಳಿಗೆ ನಾಲ್ಕಾಣೆ ನೀಡುದ್ರಾ ಎಂದು ಪ್ರಶ್ನಿಸಿದ ಶಾಸಕರು ಸುಖಾಸುಮ್ಮನೆ ಹಿಂದುಳಿದ ವರ್ಗಗಳ ವಿರೋಧಿ ಎಂದು ಯಾಕೆ ಬಿಜೆಪಿಯನ್ನ ದೂರುತ್ತೀರಿ. ನಿಮ್ಮ ಸಾಧನೆ ಏನು ಹೇಳಿ ಎಂದು ಪ್ರಶ್ನಿಸಿದರು. 


ಕಾಂಗ್ರೆಸ್ ಹೈಕಮಾಂಡ್ ಗೆ ಕಿಂಚಿತ್ತು ಸ್ವಾಭಿಮಾನವಿಲ್ಲ. ಯಾಕೆ ಸಿದ್ದರಾಮಯ್ಯನವರ ಸರ್ಕಾರ ಬೇಕು? ಕಾಂಗ್ರೆಸ್ ನಲ್ಲಿ ಯಾರೂ ನಾಯಕರಿಲ್ವಾ? ಅವರ ಹೈಕಮಾಂಡ್ ಮೇಲಿಂದ ಕೆಳಗೆ ಓಡಿ ಬಂದಿದೆ. ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.


ನ್ಯಾಯಾಲಯ 10 ದಿನ ಕಾಲಕೊಟ್ಟಿದ್ದು ಯೋಚಿಸಿ ರಾಜೀನಾಮೆ ನೀಡಿ ಬನ್ನಿ ಎಂದು ನನಗೆ ಅನಿಸುತ್ತಿದೆ. 10 ದಿನಗಮದ ಒಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ.  ನಿಮ್ಮ‌ಮೂಗಿನ ಅಡಿ ನಡೆದ ಅನೇಕ ಘಟನೆಗಳು ಆತಂಕ ಹುಟ್ಟಿಸುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಬೇರೆ ರಾಜ್ಯದ ಚುನಾವಣೆ ಜಾಹೀರಾತು ನೀಡಿದ್ದೂರಿ. ಇದು ಭ್ರಷ್ಠಾಚಾರದ ಪರಮಾವಧಿ ಎಂದು ಬಣ್ಣಿಸಿದರು‌ 


ಬಿಜೆಪಿ ಸಗಣಿ ತಿಂದಿದ್ದಕ್ಕೆ ಕಾಂಗ್ರೆಸ್ ಗೆ ಅಧಿಕಾರ ಬಂತು. ಬಿಜೆಪಿ ಭ್ರಷ್ಠಾಚಾರ ನಡೆಸಿಲ್ಲವಾ ಎಂದು ಕೇಳುವ ಕಾಂಗ್ರೆಸ್ ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ ಎಂದಿದ್ದಕ್ಕೆ ಪ್ರಾಸಿಕ್ಯೂಷನ್ ಗೆ ನೀಡಲಾಗಿದೆ. ಕುಮಾರ್ ಸ್ವಾಮಿಗೂ ಪ್ರಾಸಿಕ್ಯೂಷನ್ ಗೆ ಕೊಡಿ,  ಯಾರು ತಡೆದವರು ನಿಮ್ಮನ್ನ ಎಂದು ಗುಡುಗಿದರು. 


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ