ಸುದ್ದಿಲೈವ್/ಶಿವಮೊಗ್ಗ
ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮಾಡಲಾಗಿದ್ದು, ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ನಲ್ಲಿ ಸಂಭವಿಸಿದೆ.
ಸ್ಟೀವನ್ (25) ಯುವಕ ಮೃತನಾಗಿದ್ದು, ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಕಳೆದ ಎರಡು ದಿನದ ಹಿಂದೆ ಘಟನೆ ನಡೆದಿದೆ.
ಪರಶುರಾಮ್ ಎಂಬುವರ ಬಳಿ 2 ಲಕ್ಷ ಸಾಲವನ್ನ ಪೇಪರ್ ಟೌನ್ ನ ನಿವಾಸಿ ಜೋಸೆಫ್ ಎಂಬುವರು ಪಡೆದಿದ್ದರು. ಜೋಸೆಫ್, ಮೃತ ಸ್ಟೀವನ್ ನ ತಂದೆಯಾಗಿದ್ದಾರೆ. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್ ಮನೆ ಬಿಟ್ಟು ಹೋಗಿದ್ದನು.
ಸಾಲ ವಸೂಲಿಗಾಗಿ ಸ್ಟೀವನ್ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿರುವುದಾಗಿ ಇಂದು ದಾಖಲಾಗಿದ್ದ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಮನನೊಂದ ಸ್ಟೀವನ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯಭದ್ರಾವತಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಯ ಬಂಧನದ ಬಗ್ಗೆ ಇನ್ನೂ ತಿಳಿದು ಬರಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ