ಗುರುವಾರ, ಆಗಸ್ಟ್ 29, 2024

ತುಂಗ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಗುರುರಾಜ್ ಕೆ.ಟಿ ವರ್ಗ

 


ಸುದ್ದಿಲೈವ್/ಶಿವಮೊಗ್ಗ


ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆ ಮತ್ತೊಮ್ಮೆ ಸರ್ಜರಿ ಮಾಡಿದೆ ಒಟ್ಟು 15ಮಂದಿ ಇನ್‌ಸ್ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿದೆ. ಈ ನಡುವೆ ಶಿವಮೊಗ್ಗದಲ್ಲಿ ಎರಡು ಪ್ರಮುಖ ಬದಲಾವಣೆಗಳು ಆಗಿವೆ. ಶಿವಮೊಗ್ಗ ಸಿಇಎನ್‌ ಹಾಗೂ ತುಂಗಾನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಲಾಗಿದೆ. 


ಇನ್ನೊಂದೆಡೆ ಶಿವಮೊಗ್ಗ ಪ್ರಮುಖ ಇನ್‌ಸ್ಪೆಕ್ಟರ್‌ಗಳ ಪೈಕಿ ಒಬ್ಬರಾದ ದೀಪಕ್‌ ಎಂಎಸ್‌ ಜಿಲ್ಲೆಯಿಂದ ಹೊರಹೋಗುತ್ತಿದ್ದು ಅವರಿಗೆ ಸ್ಥಳ ತೋರಿಸಿಲ್ಲ. ಇನ್ನೊಂದೆಡೆ ಕಡೂರು ಪೊಲೀಸ್‌ ಟ್ರೈನಿಂಗ್‌ ಸ್ಕೂಲ್‌ನಲ್ಲಿದ್ದ ಕೆಟಿ ಗುರುರಾಜ್‌ ಶಿವಮೊಗ್ಗಕ್ಕೆ ವಾಪಸ್‌ ಆಗುತ್ತಿದ್ದಾರೆ. 


ಗುರುರಾಜ ಕೆ ಟಿ ಪೊಲೀಸ್ ತರಬೇತಿ ಶಾಲೆ, ಕಡೂರು, ಚಿಕ್ಕಮಗಳೂರು. ತುಂಗಾನಗರ ಪೊ.ಠಾಣೆ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.  ತುಂಗಾನಗರ ಪೊಲೀಸ್‌ ಠಾಣೆಯ ಪಿಐ ಆಗಿದ್ದ ಮಂಜುನಾಥ ಬಿ, ಶಿವಮೊಗ್ಗ ಜಿಲ್ಲೆ. ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ)ಗೆ ವರ್ಗಾವಣೆಯಾಗಿದ್ದಾರೆ.


ಸಿಇಎನ್ ಠಾಣೆಯ ಪಿಐ. ದೀಪಕ್ ಎಂ ಎಸ್ ಗೆ  ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಲು ಸೂಚಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ