ಗುರುವಾರ, ಆಗಸ್ಟ್ 29, 2024

ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ




ಸುದ್ದಿಲೈವ್/ಶಿವಮೊಗ್ಗ


ಜೆಡಿಎಸ್ ನ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ದೊರೆತಿದೆ. ಇಂದು ಬೆಳಗ್ಗೆ 11 ಗಂಟೆಗೆ 18 ನೇ ವಾರ್ಡ್‌ನ ವಿನೋಬನಗರದ ಕಂಚಿಕಾಮಾಕ್ಷಿ ನಗರದಲ್ಲಿರುವ ವಿರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಯಿತು. 


ಮಹಾನಗರ ಪಾಲಿಕೆ ಚುನಾವಣೆಯ ಸಿದ್ಧತೆ ನಡೆಯುತ್ತಿರುವುದರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಚಾಲನೆ ನೀಡಿದರು. 


ಪ್ರತಿ ಬೂತ್ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದೆ.  ಸುಮಾರು 30 ಸಾವಿರ ಹೊಸ ಸದಸ್ಯರನ್ನುಮಾಡಲು ಉದ್ದೇಶಿಲಾಗಿದ್ದು ಮನೆ ಮನೆಗೆ ತೆರಳಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ