ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಕಸಬ ಹೋಬಳಿ ಆಲದೇವರ ಹೊಸೂರು ಸರ್ವೇನಂ 27 ರಲ್ಲಿ ಅರಣ್ಯ ಇಲಾಖೆಯು ಜೆಸಿಬಿಯಲ್ಲಿ 30 ತೆಂಗಿನಮರ ನಾಶಪಡಿಸಿರುವುದನ್ನ ಖಂಡಿಸಿ ಮಲೆನಾಡ ರೈತ ಹೋರಾಟ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ.
ನಾಶಪಡಿಸಿದ ತೆಂಗಿನ ಮರವನ್ನ ಟ್ರ್ಯಾಕ್ಟರ್ ನಲ್ಲಿ ಹೇರಿಕೊಂಡು ಬಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದ್ದಾರೆ.
ನ್ಯಾಯಾಲಯದ ಮುಂದೆ, ಸರ್ವೆ ನಙಬರ್ 27 ರಲ್ಲಿ 230 ಜಮೀನು ಬರಲಿದ್ದು, ಈ ಜಮೀನಿನಲಗಲಿ ಒಂದಿಂಚು ಭೂಮಿಯೂ ಅರಣ್ಯಕ್ಕೆ ಬರೊದಿಲ್ಲ ಎಂದು ನ್ಯಾಯಾಲಯದ ಮುಂದೆ ಅರಣ್ಯದ ರೇಂಜರ್ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ದಬ್ಬಾಳಿಕೆ ಮೂಲಕ 30 ತೆಂಗಿನಮರ ಕಡಿದಿದ್ದಾರೆ.
ಜಂಟಿ ಸರ್ವೆ ನಡೆಸಲು ತಹಶೀಲ್ದಾರ್ ಅವರು ಅರಣ್ಯಕ್ಕೆ ಪತ್ರ ಬರೆದಿದ್ದಾರೆ. ಈ ವೇಳೆ ನಿಗದಿ ಆದ ದಿನಾಂಕದಂದು ಸರ್ವೆ ಮಾಡಲು ತಹಶೀಲ್ದಾರ್ ಗೆ ಸಾಧ್ಯವಾಗದ ಕಾರಣ ಆ.15 ಕ್ಕೆ ಮುಂದೂಡಲಾಗಿತ್ತು. ಆದರೆ ಆ.07 ರಂದು ಅರಣ್ಯ ಇಲಾಖೆ ಏಕಾಏಕಿ 30 ತೆಂಗಿನಮರವನಚನ ಕಡಿದು ಹಾಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹೋರಾಟದ ನೇತೃತ್ವವನ್ನ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್, ಸಚಿವ ಮಧು ಬಂಗಾರಪ್ಪ, ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ರೈತರು ದಿಕ್ಕಾರ ಕೂಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ