ಶುಕ್ರವಾರ, ಆಗಸ್ಟ್ 30, 2024

ಜಂಟಿ ಆಯುಕ್ತರನ್ನ ವಜಾಗೊಳಿಸುವಂತೆ ಆಗ್ರಹ

 



ಸುದ್ದಿಲೈವ್/ಶಿವಮೊಗ್ಗ


ಅಸಂಘಟಿತ ಕಟ್ಟಡ ಕೂಲಿ ಕಾರ್ಮಿಕರ ಒಕ್ಕೂಟ ಶಿವಮೊಗ್ಗ ಮತ್ತು ಭದ್ರಾವತಿಯ ನಡುವೆ ಓಡಾಡುವ ಅಧಿಕ ಭಾರ ಹೋರುವ ಟ್ರಕ್ ಗಳ ಮೇಲೆ ಟಾರ್ಪಲ್ ಇಲ್ಲದೆ ಓಡಾಡುವ ಬಗ್ಗೆ ಆಕ್ಷೇಪವೆತ್ತಿದೆ. 


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಘಟನೆ ವಿನೋದ್ ವಿ ಸ್ಥಳೀಯ ಆರ್ ಟಿ ಒಗಳಿಗೆ ದೂರು ನೀಡಿದರೆ ದಂಡ ವಿಧಿಸಿದ್ದು ಬಿಟ್ಟರೆ ಬೇರೆಯಾವ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿ ಹಾಲಸ್ವಾಮಿ ಅವರ ಕಾರ್ಯವೈಖರಿಯನ್ನ ಸಂಘಟನೆ ಆಕ್ಷೇಪಿಸಿದ್ದಾರೆ. 


ಇದನ್ನ ಸರ್ಕಾರಿ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಾಗ ಅವಿಶೇಷ ತಂಡ ಬಂದರೂ ಅವತ್ತು ಟ್ರಕ್ ಗಳೆ ಚಲಿಸದಂತೆ ನೋಡಿಕೊಂಡಿದ್ದವರಲ್ಲಿ ಹಾಲಸ್ವಾಮಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಆರ್ ಟಿಒದ ಜಂಟಿ ಸಾರಿಗೆ ಆಯುಕ್ತ ಹಾಲಸ್ವಾಮಿ ಅವರನ್ನ ಅನಾನತ್ತು ಗೊಳಿಸಬೇಕೆಂದು ಸಂಘಟನೆಯ ವಸಂತ್ ಆಗ್ರಹಿಸಿದ್ದಾರೆ. 


ಆರ್ ಟಿ ಒ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದು ಮೂರು ವರ್ಷದಿಂದ ಕೆಲಸ ನಿರ್ವಹಿಸಿರುವ ಬಗ್ಗೆ ದುರಸ್ತಿಯಲ್ಲಿದೆ ಎಂದು ಹೇಳಿತ್ತಾರೆ. ದಿನಚರಿ, ಲಾಗ್, ಅಟೆಡೆನ್ಸ್ ನ್ನ ಮಾಹಿತಿ ಹಕ್ಕಿನಲ್ಲಿ ನೀಡಿಲ್ಲವೆಂದು ವಿನೋದ್ ವಿ


ಭಾರಿ ವಾಹನಗಳು ಮರಳು, ಮಣ್ಣು, ಕಲ್ಲುಗಳನ್ನ  ಸಾಗಾಣಿಕೆ ಮಾಡುವಾಗ ಹಿಂಬದಿಯಲ್ಲಿ ಬರುವ ದ್ವಿಚಕ್ರವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನ ತಪ್ಪಿಸಲು ಮನವಿ ಮೂಲಕ ಹೋರಾಟ ನಡೆಸಿದ್ದೇವೆ. ಇದರ ಬೆನ್ನು ಬಿದ್ದಿದ್ದಕ್ಕೆ ಯಾವ ಕ್ರಮ ಜರಿಗಿಸಿಲ್ಲ ಎಂದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ