ಶನಿವಾರ, ಆಗಸ್ಟ್ 17, 2024

ವನ್ಯ ಜೀವಿಗಳ ಬೇಟೆ, ಆರೋಪಿ ಅರೆಸ್ಟ್!



ಸುದ್ದಿಲೈವ್/ಶಿವಮೊಗ್ಗ


ಹೊಸನಗರ ತಾಲೂಕಿನಲ್ಲಿ ವನ್ಯಜೀವಿಗಳನ್ನ ಬೇಟೆಯಾಡಿದ  ವ್ಯಕ್ತಿಯನ್ನ ಅರಣ್ಯ ಇಲಾಖೆ ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ  ಅರಣ್ಯ ಇಲಾಖೆ ಅಧಿಕಾರಿಗಳು ಬೇಟೆಯಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.


ಹೊಸನಗರ ತಾಲೂಕು ನಗರ ವಲಯ ಅರಣ್ಯ ವ್ಯಾಪ್ತಿಯ ಹುಂಚ ಹೋಬಳಿ ಬಾಳೆಕೊಪ್ಪ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಮಾಲು ಸಹಿತ ಆರೋಪಿ ಸತೀಶ್‌ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆಂಚಪ್ಪನವರ್ ಮಾರ್ಗದರ್ಶನದಲ್ಲಿ, ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ನಿರ್ದೇಶನದಂತೆ, ನಗರ ವಲಯ ಅರಣ್ಯಾಧಿಕಾರಿ ಮಲ್ಲನಗೌಡ, ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಪಿ.ನರೇಂದ್ರ ಕುಮಾರ್, ಸತೀಶ್, ಸತೀಶ್ ನಾಯಕ್, ಅಮೃತ ಸುಂಕದ್, ಗಸ್ತು ಅರಣ್ಯ ರಕ್ಷಕರಾದ ಯೋಗರಾಜ್, ಆಂಜನೇಯ, ಮನೋಜ್ ಹಾಗು ವಾಹನ ಚಾಲಕ ರಾಮು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ