ಭಾನುವಾರ, ಆಗಸ್ಟ್ 18, 2024

ದಂಪತಿ ಸಮೇತರಾಗಿ ಬಂದು ಭದ್ರೆಗೆ ಬಾಗಿನ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್ ಪಿ ಯ ಭದ್ರಾ ಜಲಾಶಯಕ್ಕೆ ದಂಪತಿ ಸಮೇತ ಆಗಿಮಿಸಿದ   ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಬಾಗಿನ ಅರ್ಪಿಸಿದ್ದಾರೆ. 


ಸಚಿವರಿಗೆ ಕಾಂಗ್ರೆಸ್ ಮುಖಂಡರು, ರೈತರು ಸಚಿವರಿಗೆ ಹಾಗೂ ಸಂಸದರಿಗೆ ಸಾಥ್ ನೀಡಿದ್ದು,  ಭದ್ರಾ ಡ್ಯಾಂ ಭರ್ತಿ ಹಿನ್ನಲೆ ಬಾಗಿನ ಸಲ್ಲಿಸಿ ಸಚಿವ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ. ಭದ್ರಾ ಡ್ಯಾಂ ಭರ್ತಿ ಆಗಿದ್ದು ನಾಲ್ಕೈದು ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದರು. 


ಶಿವಮೊಗ್ಗದ ತುಂಗಾ ಮತ್ತು ಭದ್ರಾ ಎರಡು ನದಿ ಮುಂದೆ ತುಂಗಭದ್ರಾ ನದಿ ಆಗಿ ಹರಿಯುತ್ತವೆ. ಡ್ಯಾಂ ಭರ್ತಿ ಆಗಿದ್ದರಿಂದ ಈ ವರ್ಷ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು. ರೈತರು ಎರಡು ಬೆಳೆ ಬೆಳೆದು ಉತ್ತಮ ಬೆಲೆ ಅವರಿಗೆ ಸಿಗಬೇಕೆಂದು ಹಾರೈಸುತ್ತೇನೆ ಎಂದರು.‌


ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಯಾಕೇ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ರಾಜೀನಾಮೆ ಯಾಕೇ ಕೊಡಬೇಕು. ಇದು ಒಂದು ವಿರೋಧ ಪಕ್ಷ ಮತ್ತು ರಾಜ್ಯಪಾಲರ ಷಡ್ಯಂತ್ರ ಅಗಿದೆ ಸಿದ್ದರಾಮಯ್ಯ ಅವರಿಗೆ ಎಲ್ಲ ಸಚಿವರ ಮತ್ತು ಜನರ ಬೆಂಬಲ ಇದೆ ಎಂದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ