ಭಾನುವಾರ, ಆಗಸ್ಟ್ 18, 2024

ಟಿಕೆಟ್ ಗೆ ಕಡಿಮೆ ಬಿದ್ದ ಹಣವನ್ನ ಪತ್ನಿ ಕಡೆಯಿಂದ ಪಡೆಯಲು ಹೋದಾಗ ಗೊತ್ತಾಯ್ತು ಚಿನ್ನಾಭರಣ ಕಳುವು


ಸುದ್ದಿಲೈವ್/ಶಿವಮೊಗ್ಗ

ದಾವಣಗೆರೆ ಬಸ್ ಹತ್ತಿದ ದಂಪತಿಗಳಿಗೆ ಟಿಕೆಟ್ ತೆಗೆಯಲು ಹೋದ ವೇಳೆ ಶಾಕ್ ಆಗಿದೆ. 53,800 ರೂ. ಚಿನ್ನ ಆಭರಣ ಕಳುವಾಗಿದೆ.


ಶಿವಮೊಗ್ಗದ ಮದಾರಿಪಾಳ್ಯದ ನಿವಾಸಿ ಮೊಹಮದ್ ಮುಹೀಬುಲ್ಲಾ ಎಂಬುವರು ಶಿವಮೊಗ್ಗದ‌ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ದಾವಣಗೆರೆ ಬಸ್ ಹತ್ತಿದ್ದು ಪತ್ನಿ, ಮಗ, ಲಗೇಜ್ ಸಮೇತ ಬಸ್ ಹತ್ತಿದ್ದಾರೆ.


ಬಸ್ ಹತ್ತಿದವರು ಬುದ್ದನಗರ ಕಡೆಯಿಂದ ಬಸ್ ನಿಲ್ದಾಣದ ಬಳಿ ಹೊರಬರುತ್ತಿದ್ದಂತೆ ಟಿಕೇಟ್ ತೆಗೆಯುವ ವೇಳೆ ಎರಡು ರೂ. ಕಡಿಮೆ ಬಿದ್ದಿದೆ. ಕಡಿಮೆ ಬಿದ್ದ ಕಾರಣ ಪತ್ನಿಗೆ ಎರಡು ರೂ ಕೊಡು ಎಂದು ಮುಹೀಬುಲ್ಲಾ ಕೇಳಿದ್ದು ಪತ್ನಿ ವ್ಯಾನಿಟಿ ಬ್ಯಾಗ್ ತೆಗೆದಾಗ ಶಾಕ್ ಆಗಿದೆ.


37500 ಗೋಲ್ಡ್ ರಿಂಗ್, 16300 ರೂ.  ಕಿವಿ ಓಲೆ ಕಳುವಾಗಿದೆ.ಬಸ್ ಹತ್ತುವಾಗ ಬಸ್ ರಶ್ ಇದ್ದ ವೇಳೆ ಅಪರಿಚಿತರಿಂದ ಈ ಕಳುವು ಪ್ರಕರಣ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ