ಶುಕ್ರವಾರ, ಆಗಸ್ಟ್ 16, 2024

ಐಬಿಯಲ್ಲಿ ನಡೆಯಿತ್ತಿದ್ದ ಸಭೆಯ ಮಧ್ಯದಲ್ಲಿಯೇ ಸಚಿವ ಮಧು ಬಂಗಾರಪ್ಪ ಹೊರನಡೆದಿದ್ದೇಕೆ?




ಸುದ್ದಿಲೈವ್/ಶಿವಮೊಗ್ಗ


ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ಆಂತರಿಕ ಸಭೆಯಿಂದ ಸಚಿವ ಮಧು ಬಂಗಾರಪ್ಪ ಎದ್ದು ಹೊರನಡೆದಿರುವ ಪ್ರಕರಣ ನಡೆದಿದೆ. ಚರ್ಚೆಯ ನಡುವೆ ಈ ಘಟನೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ.


ಅಲ್ಪಸಂಖ್ಯಾತ ಸಮುದಾಯದ ಬೇಡಿಕೆ ನಡುವೆ ಸಚಿವರು ಎದ್ದುಬಂದಿದ್ದು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಲ್ಪಸಂಖ್ಯಾತರಿಗೆ ಏನೂ ಕೊಡಲಿಲ್ಲ ಎಂಬ ಚರ್ಚೆ ಆಂತರಿಕ ಸಭೆಯಲ್ಲಿ ಧ್ವನಿ ಎದ್ದಿದೆ. 


ಈಗಾಗಲೇ ಬಲ್ಕಿಸ್ ಬಾನು ಮತ್ತು ಪರ್ವೇಜ್ ಗೆ ಸ್ಥಾನ ಮಾನ ನೀಡಲಾಗಿದೆ ಎಂದು ಸಚಿವರು ಹೇಳುತ್ತಿದ್ದಂತೆ ರಾಜ್ಯ ನಾಯಕರು ನೀಡಿರುವುದು. ನೀವೇನು ಶಿಫಾರಸು ಮಾಡಿಲ್ಲ ಎಂಬ ಮಾತನ್ನ ಅಲ್ಪಸಂಖ್ಯಾತರ ನಾಯಕರು ತಿಳಿಸಿದ್ದಾರೆ.  2023 ರ ವಿಧಾನ ಸಭೆ ಚುನಾವಣೆ ವೇಳೆ ಏನು ಭರವಸೆ ನೀಡಿದ್ದೀರೋ ಆ ಭರವಸೆ ಈಡೇರೆಸುತ್ತಿಲ್ಲ ಎಂದು ನಾಯಕರಿಗೆ ತಿಳಿಸಿದ್ದಾರೆ.


ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇ ನಮಗೆ ಬೇಜಾರಾಗಿದೆ. ಚುನಾವಣೆಯಲ್ಲಿ ನೀವೆಲ್ಲಾ ಬೆಂಬಲ ನೀಡಿದ್ದರೆ ಹೀಗೆಲ್ಲಾ ಆಗುತ್ತಿತ್ತ ಎಂಬ ಪ್ರಶ್ನೆಯನ್ನ ಸಚಿವರು ಪ್ರಸ್ತಾಪಿಸಿದ್ದಾರೆ. ಇದನ್ನ ಪ್ರತಿಯಾಗಿ ನಾವು ನಿಮ್ಮ ಸಹೋದರಿಯನ್ನ ಚುನಾವಣೆಗೆ ಕರೆತನ್ನಿ ಎಂದು ಹೇಳಿದ್ವಾ? ನೀವು ಕರೆತಂದಾಗ ಮತಹಾಕಿದ್ದೇವೆ ಎಂಬ ಮಾತು ಕೇಳಿ ಬಂದಿದೆ. 



ಈ ವಿಷಯ ಕೇಳುತ್ತಿದ್ದಂತೆ ಅಸಮಾಧಾನಗೊಂಡಂತೆ ಕಂಡು ಬಂದ ಮಧು ಬಂಗಾರಪ್ಪ ಸಭೆಯ ಮಧ್ಯೆ ಎದ್ದು ಹೊರ ನಡೆದರು. ಇದರಿಂದ ಅಲ್ಪಸಂಖ್ಯಾತರ ಬೇಡಿಕೆ ಏನಾಗಲಿದೆ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಆಸೀಫ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಮುಜ್ಜು ಯಾನೆ ಮುಜ್ಜಾಯಿದ್ ಪಾಶ, ಶಾಮೀರ್ ಖಾನ್ ಹಾಗೂ ಅನೇಕರು ಉಪಸ್ಥಿತರದ್ದರು. ಜೊತೆಗೆ ಮುಂಬರುವ ಪಾಲಿಕೆ ಚುನಾವಣೆಯಲ್ಲಿ  ಹೆಚ್ಚಿನ ಸ್ಥಾನ ನೀಡುವಂತೆ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ