ಸುದ್ದಿಲೈವ್/ಜೋಗ
ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಹಾಗೂ ಪ್ರವಾಸಿ ವಾಹನಗಳ ಪ್ರವೇಶದ್ವಾರದ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ನೂತನ ದರ ಗುರುವಾದಿಂದಲೇ ಜಾರಿಯಾಗಿದೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಜೋಗ್ ನಿರ್ವಹಣಾ ಪ್ರಾಧಿಕಾರ (ಜೆಎಂಎ) ಹಣ ಹೆಚ್ಚಳ ಅನಿವಾರ್ಯ ಎಂದಿದೆ. 137 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಪ್ರಾಧಿಕಾರ ಜೋಗದ ಪ್ರವೇಶ ದರ ಹೆಚ್ಚಿಸಲಾಗಿದೆ.
| ಹಳೆಯ ದರ |
ನೂತನ ದರ |
ಪ್ರವಾಸಿಗರು |
10 |
20 |
ವಿದೇಶಿಗರು |
50 |
100 |
ದ್ವಿಚಕ್ರ ವಾಹನ |
20 |
|
ನಾಲ್ಕು ಚಕ್ರ ವಾಹನ |
50 |
80 |
ಆಟೋ ರಿಕ್ಷಾ |
30 |
40 |
ಟೆಂಪೋ ಟ್ರಾವೆಲ್ |
100 |
150 |
ಬಸ್ |
150 |
200 |
ಜೋಗ ಜಲಪಾತದ ಮುಖ್ಯದ್ವಾರದಲ್ಲಿ ಬುಧವಾರ ಹೊಸ ನಾಮಫಲಕವನ್ನು ಅಳವಡಿಸುವ ವೇಳೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ, ಈ ಹೊಸ ದರದ ಪರಿಷ್ಕರಣಾ ಪಟ್ಟಿಯು ಗುರುವಾರದಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಜೋಗ ಜಲಪಾತ ಪ್ರದೇಶವನ್ನು ನಿರ್ವಹಿಸಲು ಆದಾಯ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದ ನೂತನ ದರಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ. ಪ್ರಸ್ತುತ ಪ್ರವಾಸಿಗರ ಪ್ರವೇಶ ಹಾಗೂ ಪ್ರವಾಸಿ ವಾಹನಗಳ ಶುಲ್ಕದಿಂದ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಸಿಗುತ್ತಿರುವ ಅದಾಯಕ್ಕಿಂತ ಸಿಬ್ಬಂದಿ ವೇತನ ಸೇರಿ ಜೆಎಂಎಗೆ ನಿರ್ವಹಣಾ ವೆಚ್ಚವೇ ಜಾಸ್ತಿಯಾಗಿದೆ. ಆದ್ದರಿಂದ ಶುಲ್ಕಜಾಸ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜೋಗ ಜಲಪಾತದ ನಿರ್ವಹಣೆಗೆ ಜೆಎಂಎ ಅಡಿ ಒಟ್ಟು 19 ಮಂದಿ ಖಾಸಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ವೇತನ ನೀಡುವ ಜತೆಗೆ ವಾರ್ಷಿಕ ನಿರ್ವಹಣೆ ಮಾಡಬೇಕು. ಪ್ರವೇಶ ಶುಲ್ಕದ ವಸೂಲಿಯನ್ನು ಕೆಎಸ್‌ಟಿಡಿಸಿ ಸಿಬ್ಬಂದಿ ಅಡಿಯಲ್ಲಿ ಮಾಡಿ ಅವರು ಬ್ಯಾಂಕ್‌ಗೆ ಜಮಾ ಮಾಡುತ್ತಾರೆ.
ಅದರಲ್ಲಿ ಶೇ.20ರಷ್ಟು ಹಣ ಅವರಿಗೆ ಸಂದಾಯವಾಗುತ್ತದೆ. ಜತೆಗೆ ವಸೂಲಿಯಾದ ಹಣದ ಪೈಕಿ ಶೇ.18ರಷ್ಟು ಜಿಎಸ್‌ಟಿ ಕಟ್ಟಬೇಕು. ಆದ್ದರಿಂದ ಆದಾಯಕ್ಕಿಂತ ಖರ್ಚೇ ಜಾಸ್ತಿ ಇದೆ. ಇದನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ