ಸುದ್ದಿಲೈವ್/ಶಿವಮೊಗ್ಗ
ಗಂಡ ಹೆಂಡತಿಯಾಗಿ ಚೆನ್ನಾಗಿದ್ದಾಗ ಹೆಂಡತಿ ಹೆಸರಿನಲ್ಲಿ ಕಾರು ಖರೀದಿಸಿದ ಗಂಡ, ಸಂಸಾರದಲ್ಲಿ ಬಿರುಕು ಬಿಟ್ಟಾಗ ನಕಲಿ ಸಹಿ ಬಳಸಿ ಆ ಕಾರನ್ನ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವ ಘಟನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2022 ರಲ್ಲಿ ಟಾಟಾ ನೆಕ್ಸಾನ್ ವಾಹನವನ್ನ ಚಿತ್ರದುರ್ಗ ಜಿಲ್ಲೆಯ ಮಹೇಶ್ ಎಂಬುವರು ಹೆಂಡತಿಯ ಹೆಸರಿನಲ್ಲಿ ಖರೀದಿಸಿದ್ದರು. ತದನಂತರದಲ್ಲಿ ಮಹೇಶ್ ಮತ್ತು ಪತ್ನಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇರೆಯಾಗಿರುತ್ತಾರೆ. ಮಹೇಶ್ ಪತ್ನಿ ಶಿವಮೊಗ್ಗದ ತುಂಗನಗರಪೊಲೀಸ್ ಠಾಣ ವ್ಯಾಪ್ತಿಯ ನಿವಾಸಿಯಾಗಿದ್ದಾರೆ.
2023 ರಲ್ಲಿ ಮಹೇಶ್ ಆರ್ ಸಿ ಬುಕ್ ನಲ್ಲಿ ಪತ್ನಿಯ ನಕಲುಸಹಿ, ದಾಖಲಾತಿ ಸೃಷ್ಟಿಸಿ ಎರಡನೇಪಾರ್ಟಿಯನ್ನಾಗಿ ಮಾಡಿಕೊಂಡು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ರೀತಿ ನಕಲಿ ದಾಖಲಾತಿ ಸೃಷ್ಠಿಸಿ ಆಸ್ತಿಗಳನ್ನ ಹೀಗೆ ವಂಚಿಸಲು ಪತಿಮುಂದಾಗಬಹುದು. ಮತ್ತು ಕಾರನ್ನ ತಮ್ಮ ಗಮನಕ್ಕೆಬಾರದೆ, ನಕಲು ಸಹಿ ಮಾಡಿ ಬದಲಿಸಿಕೊಂಡು ವಂಚಿಸಿರುವ ಬಗ್ಗೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ