ಸುದ್ದಿಗೋಷ್ಟಿ ನಡೆಸಿದ ಜಿತೇಂದ್ರ |
ಸುದ್ದಿಲೈವ್/ಶಿವಮೊಗ್ಗ
ಮೊನ್ನೆ ಹೈಕೋರ್ಟ್ ನಲ್ಲಿ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಒಬ್ಬರು ನ್ಯಾಯಮೂರ್ತಿಗಳ ಮುಂದೆ ರಕ್ಷಣೆಕೊಡಿ ಎಂದು ಕೈಮುಗಿದು ಬೇಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾದ್ದಾಂತ ಮಾಡಿದ ಪ್ರಕರಣ ನಿನ್ನೆನೇ ಮುಕ್ತಾಯಗೊಂಡಿದೆ. ಆದರೆ ಆತ ಪ್ರಸ್ತಾಪಿಸಿರುವ ಮದುವೆ ವಿಚಾರ ಮತ್ತು ಗಾಂಜಾ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಯಾವ ಹುಡುಗಿ ರಿಜೆಕ್ಟ್ ಮಾಡಿದಳೋ ಆ ಹುಡುಗಿ ವಿಚಾರದಲ್ಲಿ ನಡೆದಿದ್ದೇ ಬೇರೆ. ನ್ಯಾಯಾಧೀಶರ ಮುಂದೆ ಆತ ಬಿಚ್ಚಿಟ್ಟ ಪ್ರಕರಣವೇ ಬೇರೆ ಎಂಬುದನ್ನ ಅಧಿಕಾರಿಯನ್ನ ಮದುವೆಯಾಗಲು ತಿರಸ್ಕರಿಸಿದ ಹುಡುಗಿಯ ಅತ್ತೆಯ ಮಗ ವಿವರವಾಗಿ ಇಂದು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಸಾಗರ ತಾಲೂಕು ಹುಲ್ಲತ್ತಿ ಗ್ರಾಮದ ಜಿತೇಂದ್ರ ಅವರ ಅತ್ತೆಮಗಳನ್ನ ಕೆಪಿಟಿಸಿಎಲ್ ಸಿವಿಲ್ ಇಂಜಿನಿಯರ್ ಶಾಂತ ಕುಮಾರ್ ಮದುವೆ ಮಾಡಲು ಮೊದಲಿಗೆ ಒಪ್ಪಿಕೊಳ್ಳುತ್ತಾರೆ. ರಿಜೆಕ್ಟ್ ಮಾಡಿದ್ದಕ್ಕೆ ಅತ್ತೆಮಗಳನ್ನ ಹಿಂಸಿಸಲು ಆರಂಭಿಸಿದ ಕೆಪಿಟಿಸಿಎಲ್ ಅಧಿಕಾರಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅತ್ತೆ ಮಗಳು ಸೊರಬದವರಾಗಿದ್ದು ಹುಡುಗಿಯ ತಂದೆ ತಾಯಿ ಅಂಗವಿಕಲರಾದ ಪರಿಣಾಮ ಆಕೆ ನಮ್ಮ ಮನೆಯಲ್ಲಿ ಬೆಳೆದಿದ್ದಾಳೆ. ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯವಾಗುವ ಶಾಂತ ಕುಮಾರ್ ಈಗಾಗಲೇ ಒಂದು ಮದುವೆಯಾಗಿ ಸಂಸಾರದಲ್ಲಿ ಸರಿಯಾಗದೆ ಈಗ ನಮ್ಮ ಅತ್ತೆ ಮಗಳ ಮದುವೆಯಾಗಲು ಬಯಸಿದ್ದಾನೆ ಎಂಬುದು ತಿಳಿಯುತ್ತದೆ.
ಇಂಜಿನಿಯರ್ ಎಂದು ಕೊಡಲು ನಿರ್ಧರಿಸಲಾಗಿತ್ತು. ವಿಚಾರಿಸಿದಾಗ ಈತ ಮದುವೆಯಾಗಿದ್ದು ಗೊತ್ತಾದ ಪರಿಣಾಮ ಆಗ ಹುಡುಗಿ ಕೊಡಲ್ಲ ಎಂದಿದ್ದವಿ. ತಂಗಿನತೇಜೋವದೆ ಮಾಡಲು ನಿರ್ಧರಿಸಿ ಮಾನಹರಣದ ಪಾಂಪ್ಲೆಂಟ್ ಸಹ ಹಂಚಿರುವುದಾಗಿ ಜಿತೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾಗರದಲ್ಲಿ ಆಸಿಡ್ ಹಾಕುವುದಾಗಿ ಬೆದರಿಸಿದ್ದ ಶಾಂತಕುಮಾರ್ ವಿರುದ್ಧ ಆಸಿಡ್ ಹಾಕುವುದಾಗಿ ದೂರು ನೀಡಿದ್ದಕ್ಕೆ, ಇದರಿಂದ ದ್ವೇಷದಿಂದ ಗಾಂಜಾ ಸಂಗ್ರಹದ ವಿಚಾರದಲ್ಲಿ ಆರೋಪಿಯನ್ನಾಗಿ ಮಾಡಲು ಆತ. ಉದ್ದೇಶ ಪೂರಕವಾಗಿ ಅಬಕಾರಿ ಇಲಾಖೆಯಿಂದ ದಾಳಿ ನಡೆಸಿದ್ದ. ದಾಳಿಯಲ್ಲಿ ಏನೂ ಪತ್ತೆಯಾಗಿರುವುದಿಲ್ಲ. ಆದರೆ ಮನೆ ಹಿಂಭಾಗದಲ್ಲಿ ಗಾಂಜಾ ಸಿಕಿರುತ್ತದೆ.
ಇದನ್ನ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಶಾಂತಕುಮಾರ್ ಸ್ವಾಮಿ ಆರೋಪಿಯಾಗಿದ್ದು, ಆತನನ್ನಬಂಧಿಸಲಾಗಿತ್ತು. ಆದರೆ ನ್ಯಾಯಮೂರ್ತಿ ಮುಂದೆ ಯೂಟ್ಯೂಬ್ ಸ್ಟ್ರೀಮ್ ಮಾಡಿ ಫಿಕ್ಸ್ ಮಾಡಲಾಗಿದೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದ. ಆದರೆ ಕಥೆ ಬೇರೆಯಾಗಿದೆ. ನಿನ್ನೆ ನ್ಯಾಯಾಲಯ ಕೈಬಿಟ್ಟಿದೆ. ಆದರೆ ಅತ್ತೆ ಮಗಳಿಗೆ ಸಾಕಷ್ಟು ತೊಂದರೆ ಕೊಡುತ್ತಿರುವುದಾಗಿ ಜಿತೇಂದ್ರ ಅಳಲು ತೋಡಿಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ