ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಸಂಸದ ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಗೆ ಮುಗಿಯದ ಆರೋಪ ಮತ್ತು ಪ್ರತ್ಯಾರೋಪಗಳು ಜಿಲ್ಲೆಯಲ್ಲಿ ಇಬ್ವರು ನಾಯಕರಿಂದ ಮುಂದುವರೆದಿದೆ. ಜನಾಭಿಪ್ರಾಯ ಮೂಡಿಸುವುದಕ್ಕಿಂತ ಮನರಂಜನೆ ದೊರೆಯುತ್ತಿದೆ. ಇದರಿಂದ ತು...ತು... ಮೈ....ಮೈ ಮುಂದುರೆದಿದೆ.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಪಾದಯಾತ್ರೆಗೆ ಉಸ್ತುವಾರಿ ಸಚಿವರು ಅನೇಕ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಬಂದು 1 ವರ್ಷ 4 ತಿಂಗಳು ಮುಗಿದಿದೆ. ವಾಲ್ಮೀಕಿ ಅಧಿಕಾರಿಯನ್ನು ಕಾಂಗ್ರೆಸ್ ಸರಕಾರ ಬಲಿ ತೆಗೆದುಕೊಂಡಿದೆ ಎಂದು ದೂರಿದರು.
ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದ್ದಾರೆ. 4-5 ಸಾವಿರ ಕೋಟಿ ಬೆಲೆ ಬಾಳುವ ಮುಡಾ ನಿವೇಶನ ಪಡೆದಿದ್ದಾರೆ. ಯಾದಗಿರಿ ಶಾಸಕ ಕಿರುಕುಳಕ್ಕೆ ಪಿಎಸ್ ಐ ಬಲಿಯಾಗಿದ್ದಾರೆ. ಸರಕಾರ ನಡೆಸುವ ವ್ಯಕ್ತಿಗಳು ಎಡವಿದಾಗ ಎಚ್ಚರಿಸುವ ಕೆಲಸವನ್ನು ವಿರೋಧ ಪಕ್ಷ ಮಾಡ್ತಿದೆ ಎಂದಿದ್ದಾರೆ.
ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಸ್ವಾರ್ಥಕ್ಕೆ ಅಲ್ಲದೇ ಹಗರಣದ ವಿರುದ್ದ ಪಾದಯಾತ್ರೆ ಮಾಡ್ತಿದ್ದಾರೆ. ಮಧು ಬಂಗಾರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಎಲ್ಲಾ ಪುರಾಣ ಬಿಚ್ಚಿಡ್ತೀನಿ. ಏರ್ ಪೋರ್ಟ್, ಹೈವೇ ರಸ್ತೆ ಕಾಮಗಾರಿ ತನಿಖೆ ಮಾಡಿಸುತ್ತೇನೆ ಅಂತಾರೆ. ತನಿಖೆ ಮಾಡಿಸಿ ಸಂತೋಷ ಎಂದು ಸಚಿವರಿಗೆ ತಿರುಗೇಟು ನೀಡಿದರು.
ಈ ಹಿಂದಿನ ಶಿಕ್ಷಣ ಸಚಿವರು ಗೌರವಯುತವಾಗಿ ನಡೆದುಕೊಂಡಿದ್ದಾರೆ. ಆಚಾರವಿಲ್ಲದ ನಾಲಿಗೆ ಅವರದ್ದು ಈಗಾಗಿಯೇ ನೋಡಿಕೊಳ್ಳುತ್ತೇನೆ, ಅಡಬೆ ದುಡ್ಡು ಅಂತಾರೆ. ಅವರಿಗಿಂತ ಚನ್ನಾಗಿ ಭಾಷೆ ಉಪಯೋಗಿಸಲು ನಮಗು ಬರುತ್ತದೆ. ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್, ವಿಸಿಬಿಲಿಟಿ ಸಮಸ್ಯೆ ಇದೆ. ಗುತ್ತಿಗೆದಾರನಿಗೆ ಈ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಈಗಾಗಿಯೇ ಕಾಮಗಾರಿ ವಿಳಂಬ ಆಗ್ತಿದೆ ಎಂದು ವಿವರಿಸಿದರು.
ಲೋಕಸಭೆ ಚುನಾವಣೆ ಮುಗಿದ ನಂತರ ನಾನು ಮೊದಲು ಹೋಗಿದ್ದು ಮಧು ಬಂಗಾರಪ್ಪ ಅವರ ಮನೆಗೆ. ಜಿಲ್ಲೆಯ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ ಅಂದಿದ್ದೆ. ಉಸ್ತುವಾರಿ ಸಚಿವರು ಅವರ ಸರಕಾರ ಬಂದ ನಂತರ ಶಿವಮೊಗ್ಗ ಜಿಲ್ಲೆಗೆ ಏನು ತಂದಿದ್ದಾರೆ. ಶಿಕ್ಷಣ ಸಚಿವರು 11 ಸಾವಿರ ಶಿಕ್ಷಕರ ನೇಮಕ ಮಾಡಿದ್ದೇವೆ ಅಂತಾರೆ.
ಬಿಜೆಪಿ ಸರಕಾರ ಇದ್ದಾಗ 11 ಸಾವಿರ ಶಿಕ್ಷಕರ ನೇಮಕ ಆಗಿದ್ದು. ಸವಾಲ್ ಹಾಕೋದು ಬಿಟ್ಟು ಅಭಿವೃದ್ಧಿ ಕೆಲಸದ ಕಡೆ ಗಮನ ಕೊಡಿ. ಮುಖ್ಯಮಂತ್ರಿ ವಿರುದ್ದ ಪಾದಯಾತ್ರೆ ಮಾಡಿದರೆ ಒಬಿಸಿ ನಾಯಕನಿಗೆ ಅವಮಾನ ಅಂತಾರೆ. ನಾನಾಗಲಿ, ನೀವಾಗಲಿ ಒಂದು ಜಾತಿ ಚೌಕಟ್ಟಿನಲ್ಲಿ ಗೆದ್ದು ಬಂದಿದ್ದೇವಾ?ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷದಲ್ಲಿ ಇರುತ್ತಾರೆ. ಶಿಕ್ಷಣ ಸಚಿವರು ಆ ಇಲಾಖೆಗೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಲಿ ಎಂದಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ತೊಂದರೆ ಕೊಟ್ಟರು. ಜಿಲ್ಲೆಯಲ್ಲಿ ಟಾರ್ಗೆಟ್ ಮಾಡಿ ಅಧಿಕಾರಿಗಳ ವರ್ಗಾವಣೆ ಮಾಡ್ತಿದ್ದಾರೆ. ಕೇವಲ ಎ ಗ್ರೂಪ್ ನೌಕರರು ಅಷ್ಟೇ ಅಲ್ಲ, ಡಿ ಗ್ರೂಪ್ ನೌಕರರನ್ನು ವರ್ಗಾವಣೆ ಮಾಡ್ತಿದ್ದಾರೆ. ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ-https://www.suddilive.in/2024/08/blog-post_97.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ