ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕದ ಬೆಳಗಾವಿಯಲ್ಲಿ 1924 ನೇ ಇಸವಿ ಡಿಸೆಂಬರ್ 26-27 ರವರೆಗೆ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 29 ನೇ ಅಧಿವೇಶನ ನಡೆದಿತ್ತು. ಅಧಿವೇಶನಕ್ಕೆ ಈಗ ನೂರರ ಸಂಭ್ರಮ. ಈ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು.
ಈ ಹಿನ್ನಲೆಯಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 2025 ರ 2 ನೇ ತಾರೀಕಿನ ವರೆಗೆ 1 ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಗ್ರಾಮ ಪಂಚಾಯಿತಿ, ವಾರ್ಡ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ವರ್ಷದ ಕಾರ್ಯಕ್ರಮದಲ್ಲಿ ಅ.02 ರಂದು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಂದ ಕನಿಷ್ಠ ಒಂದು ಕಿಲೋಮೀಟರ್ ಗಾಂಧಿ ನಡಿಗೆ ಮತ್ತು ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಗಳನ್ನ ಮಾತ್ರ ಬಳಸುವಂತೆ, ಭಾಗವಹಿಸುವವರು ಶ್ವೇತವಸ್ತ್ರ ಹಾಗೂ ಗಾಂಧಿ ಟೋಪಿ ಧರಿಸಿ ಭಾಗಿಯಾಗವಂತೆ, ಗಾಂಧಿ ಭಾವಚಿತ್ರ ಬಳಕೆ ಮಾಡುವಂತೆ ಕಡ್ಡಾಯ ಗೊಳಿಸಕಾಗಿದೆ ಎಂದರು.