ಶುಕ್ರವಾರ, ಸೆಪ್ಟೆಂಬರ್ 6, 2024

ಸೆ.12 ರಂದು ಸೌಹಾರ್ಧವೇ ಹಬ್ಬ



ಸುದ್ದಿಲೈವ್/ಶಿವಮೊಗ್ಗ


ಗಣಪತಿ ಮತ್ತು ಈದ್ ಹಬ್ಬದ ಪ್ರಯುಕ್ತ ಸೌಹಾರ್ಧವೇ ಹಬ್ಬ ಆಚರಿಸಲಾಗುತ್ತಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ ಶ್ರೀಪಾಲ್ ಸೆ.12 ರಂದು ಮಧ್ಯಾಹ್ನ 3 ಗಂಟೆಗೆ ಮನನ ಎರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು. 


ನಮ್ಮ ಊರನ್ನ ಜಗದಗಲ ಹೆಸರಾಗಿಸಲು ಸನ್ನದ್ಧರಾಗಬೇಕಿದೆ. ನಮ್ಮ ನಗರದ ಆಸ್ಮಿತೆ ಉಳಿಯ ಬೇಕಿದೆ. ಆಆಸ್ಮಿತೆಯೇ ಬ್ಯಾಂಡ್ ಶಿವಮೊಗ್ಗ. ಇದು ನನ್ನ ಮತ್ತು ನಮ್ಮ ನಗರ ಎಂದಿಗೂ ಶಾಂತಿ ಸೌಹಾರ್ಧತೆಗೆ ಹೆಸರಾಗಿರಬೇಕು. ಇಷ್ಟಾದರೆ ನಮ್ಮ ನಗರಕ್ಕೊಂದು ಬ್ರ್ಯಾಂಡ್ ಇಮೇಜ್ ತಾನಾಗಿಯೇ ಲಭ್ಯವಾಗಲಿದೆ ಎಂದರು. 


ಮೊದಲ ವರ್ಷ ನಮ್ಮ ನಡಿಗೆ ಶಾಂತಿಯ ಕಡೆಗೆ ಎಂಬ ಜಾಥ ಹಮ್ಮಿಕೊಳ್ಳಲಾಗಿತ್ತು. ಆಗ, ಮಹಿಳೆಯರು, ವಿಕಲ ಚೇತನರು, ಮಹಿಳೆಯರು ಭಾಗಿಯಾಗಿದ್ದರು. ಅದರ ಯಶಸ್ಸನ್ನ ಕಳೆದ ವರ್ಷ ಸೌಹಾರ್ಧವೇ ಹಬ್ಬ ಎಂದು ಆಚರಿಸಲಾಯಿತು. ಈ ವರ್ಷ ಮತ್ತೆ ಸೌಹಾರ್ಧ ಹಬ್ಬ ಆಚರಿಸಲಾಗುತ್ತಿದೆ. 


ಸೆ.12 ರಂದು ನಗರದ ಮೆಗ್ಗಾನ್ ಆಸ್ಪತ್ರೆಯ ಅಂಗಳದಿಂದ ಸೈನ್ಸ್ ಕಾಲೇಜಿನ ಮೈದಾನದವರೆಗೆ ಸರ್ವಜನಾಂಗದ ಶಾಂತಿಯ ತೋಟ, ಸೌಹಾರ್ಧತೆಯ ನೆಲ ನಮ್ಮ ಶಿವಮೊಗ್ಗ ಎಂದು ಹೆಜ್ಜೆ ಹಾಕೋಣ ಬನ್ನಿ ಸೌಹಾರ್ಧತೆಯ ಬ್ಯಾಂಡ್ ತಂದುಕೊಳ್ಳೋಣ ಎಂದು ಕರೆದರು‌ 


ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ, ಮಂಜುನಾಥ್ ಎನ್,  ಹೆಚ್ ಆರ್ ಬಸವರಾಜಪ್ಪ,  ಕಿರಣ್ ಕುಮಾರ್, ರಫಿ, ಗುರುಮೂರ್ತಿ ಎಂ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ